
ಆರ್ ಸಿ ಬಿ ವಿಚಾರದಲ್ಲಂತೂ ಅದನ್ನು ಕನ್ನಡ ನೆಲದ ಭಾಷೆಯ ಅಸ್ಮಿತೆಯೆಂಬಂತೆ ಬಿಂಬಿಸಲಾಗುತ್ತಿದೆ. ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ ತಂಡ ಕಟ್ಟಿಕೊಂಡು ಜೂಜಿಗಿಳಿದರು. ಅದನ್ನು ನೋಡಲು ಜನರನ್ನು ಹುಡುಕಿ ತಂದರು. ಅವರ ಮನಸ್ಸನ್ನು ಹಾಳುಗೆಡವಿ ಅವರನ್ನು ತಮ್ಮ ಉತ್ಪನ್ನಗಳಿಗೆ ಗಿರಾಕಿಗಳನ್ನಾಗಿ ಮಾಡಿಕೊಂಡರು. ಇದು ಕನ್ನಡ ನೆಲದ ತಂಡವಲ್ಲ. ಆರ್ ಸಿ ಬಿ ಖಾಸಗಿಯವರದ್ದು ಎಂಬ ಕನಿಷ್ಠ ಪ್ರಜ್ಞೆಯನ್ನು ಯುವಜನರಲ್ಲಿ ಬೆಳೆಸುವಲ್ಲಿ ನಾವೆಲ್ಲರೂ ಸೋತಿದ್ದೇವೆ. ಸರ್ಕಾರವು ಸಂವೇದನಾಶೀಲವಾಗಿ ವರ್ತಿಸಿಲ್ಲ. ಬಹುಪಾಲು ಜನರು ಆರ್ ಸಿ ಬಿ ಅಭಿಮಾನಿಗಳಾಗುತ್ತಿದ್ದರಿಂದ ಸರ್ಕಾರವು ಅದಕ್ಕೆ ಪರೋಕ್ಷ ಬೆಂಬಲ ನೀಡಿತು. ಇದೆಲ್ಲವೂ ಅಜ್ಞಾನವೇ.
ಯುವಜನರು ಹೋಗುತ್ತಿರುವ ದಿಕ್ಕನ್ನು ಸರಿಪಡಿಸುವುದು ಸಂವೇದನಾಶೀಲ ಸರ್ಕಾರದ ಕೆಲಸ. ಯುವಜನ ಕ್ರೀಢಾ ಇಲಾಖೆಯಲ್ಲಿ ಯುವಜನರಿಗೆ ಇದ್ದ ಅನೇಕ ಕಾರ್ಯಕ್ರಮಗಳನ್ನ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಸರ್ಕಾರ ಸೋಲುತ್ತಿದೆ. ಇಲ್ಲಿ ಕಂಪನಿಗಳ ಪ್ರತಿನಿಧಿಸುವ ಕ್ರಿಕೆಟ್ ತಂಡವನ್ನು ವಿಧಾನಸೌಧದ ಎದುರಿಗೆ ಕರೆದು ಸನ್ಮಾನಿಸುವುದು ಎಷ್ಟು ಸರಿ. ಈ ಸರ್ಕಾರ ಸಂವೇದನೆಗಳನ್ನು ಕಳೆದುಕೊಂಡಿದೆ ಎಂದು ಅರಿಯಲು ಇಷ್ಟು ಸಾಕು.
ಯುವಜನರಿಗೆ ತಿಳಿಯಪಡಿಸುವುದೇನೆಂದರೆ, ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಸಣ್ಣ ಸಣ್ಣ ಸಂಗತಿಗಳನ್ನು ನಿತ್ಯವೂ ಸಂಭ್ರಮಿಸೋಣ. ಎಷ್ಟೊಂದು ಸಂಗತಿಗಳಿವೆ, ಟೆಸ್ಟ್ ನಲ್ಲಿ ಪಾಸಾಗಿದ್ದಕ್ಕೆ, ಕಾಲೇಜಿನಲ್ಲಿ ಎಕ್ಸಾಂನಲ್ಲಿ ಪಾಸ್ ಆಗಿದ್ದಕ್ಕೆ, ಅಪ್ಪನ ವ್ಯಾಪಾರದಲ್ಲಿ ಏರುಗತಿ ಕಂಡಿದೆ, ತೋಟದಲ್ಲಿ ಚೆನ್ನಾಗಿ ಬೆಳೆ ಬಂದಿದೆ, ನಮ್ಮ ಮನೆಗೊಂದು ಪುಟ್ಟ ನಾಯಿ ಮರಿ ತಂದಿದ್ದೇವೆ, ಹೊಸ ಬೈಕ್ ತಂದೆವು, ಇಂತಹ ಸಣ್ಣ ಸಣ್ಣ ಸಣ್ಣ ಸಂಗತಿಗಳು ಸಾಕು. ಟೀ ಪಾರ್ಟಿ ಮಾಡಿ ಸಂಭ್ರಮಿಸೋಣ, ಕೇಕ್ ಕತ್ತರಿಸಿ ಸಂಭ್ರಮಿಸೋಣ, ಬಿರಿಯಾನಿ ತಿಂದು, ಚಂದದ ಅಡುಗೆ ಮಾಡಿ ಊಟ ಮಾಡಿ ಸಂಭ್ರಮಿಸೋಣ ಹೀಗೆ. ಇವೆಲ್ಲಾ ನಮ್ಮ ಬದುಕಿನ ಸಂಭ್ರಮಗಳು. ಅವುಗಳನ್ನು ಸಂಭ್ರಮಿಸಿದಷ್ಟು ನಮಗೆ ಎನರ್ಜಿ ಬರುತ್ತದೆ. ಈತರ ನಮ್ಮದಲ್ಲದ ಸಂಭ್ರಮಕ್ಕೆ ಭಾಗಿಯಾಗುವುದು ಬೇರೆಯವರ ಮನೆ ಮದುವೆಗೆ ಹೋಗಿ ಬಂದಂತೆ ಅಷ್ಟೇ, ಅದನ್ನು ಇತಿಮಿತಿಯಲ್ಲಿ ಸಂಭ್ರಮಿಸುವುದು ಒಳ್ಳೆಯದು. ಇಷ್ಟೊಂದು ಹುಚ್ಚು ಅಭಿಮಾನ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಜೀವನ ಕೌಶಲ್ಯ ತರಬೇತುದಾರು. ಇಷ್ಟೊಂದು Build up ಯಾಕೆ? RCB ಗೆದ್ದಿರುವುದು ಬರೀ Indian Premier League (IPL) ಎಂದರೆ ಭಾರತದ ಮತ್ತು ವಿದೇಶಿ ಕ್ರಿಕೆಟ್ ಆಟಗಾರರು ಸೇರಿಕೊಂಡು ಆಟ ಆಡಿ ಗೆದ್ದಿರುವ ಕಪ್ ಇದು. World Cup ಏನೂ ಗೆದ್ದಿಲ್ಲ ಅಲ್ಲವ್ರಾ ? ಇಷ್ಟಕ್ಕೂ RCB ತಂಡದಲ್ಲಿ ಕನ್ನಡಿಗರು ಎಷ್ಟು ಜನ ಈ 2025 ತಂಡದಲ್ಲಿ ಇದ್ದರು? ಅಗತ್ಯಕ್ಕಿಂತ ಹೆಚ್ಚು ಜನರು ಒಂದೇ ಜಾಗದಲ್ಲಿ ಸೇರಿದ್ದರಿಂದ ಈ ರೀತಿಯ ಅನಾಹುತ ಆಗಿದೆ, ತಪ್ಪಿಸಬಹುದಾದ ದುರಂತ,
ಈ ಕ್ರಿಕೆಟ್ ಮೋಹ ಎಷ್ಟು ಹೆಚ್ಚು ಇದೆ ಅಂದರೆ,, ಬೇರೊಬ್ಬರ ಗೋಡೆ ಏರಿ ಒಳಗೆ ಹೋಗುವುದು, ಬೇರೆ ಒಬ್ಬರ ಹೊಸ ಕಾರಿನ ಮೇಲೆ ಏರಿ ಅದನ್ನು ಝಾಕಮ್ ಮಾಡಿ ನಾಶ ಪಡಿಸುವುದು,,
ಈಗ ಅವರ ಕಾರನ್ನು ಸರಿ ಮಾಡಲು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾಗುತ್ತದೆ,ಇದರ ಖರ್ಚುನ್ನು ಯಾರು ಭರಿಸುವುದು?

ದೇಹದಲ್ಲಿ ಹೊಸ ರಕ್ತ ಹರಿಯುತ್ತದೆ ನಿಜ, ಆದರೆ ಯಾವುದು ತಪ್ಪು ಯಾವುದು ಸರಿ ಅಂತ ಜ್ಞಾನ ಬೇಡವೇ? ಶಿಸ್ತು ಇಲ್ಲದೆ ಹೋದಲ್ಲಿ ಅನಾಹುತ ತಪ್ಪಿದ್ದಲ್ಲ,
ಗೆಲುವಿನ ಸಂಭ್ರಮ, ಹೆಮ್ಮೆ, ಸಂತೋಷ ಆಚರಿಸಿ, ಆದರೆ ಹೀಗೇ ಅಲ್ಲ, ನಿಜ, ಈ ಸಾರಿ ಕಪ್ ನಮ್ದೇ ಅಂತ 17 ಸಾರಿ ಹೇಳುತ್ತಾ ಬಂದಿದ್ದೇವೆ, ಅದೃಷ್ಟದಿಂದ ಕಪ್ ನಮಗೆ ಬಂದಿದೆ, ತುಂಬಾ ಸಂತೋಷ,
ಆದರೆ ಈ ಘೋರ, ತಪ್ಪಿಸಬಹುದಾದ ದುರಂತದಿಂದ ಆ ಆನಂದ, ಸಂತೋಷ ಎಲ್ಲವೂ ಕಳೆದು ಕೊಂಡು ದುಃಖದಲ್ಲಿ ಮುಳುಗಿದ್ದೇವೆ,
ಈ ದುರಂತ ಗೆದ್ದ ಕಪ್ಪಿನ ಸಂಭ್ರಮವನ್ನು ಆಚರಿಸದ ಹಾಗೆ ಮಾಡಿದೆ, ಈ ಘೋರ ಘಟನೆ ಆರ್, ಸಿ, ಬಿ ಕ್ರಿಕೆಟ್ಟಿನ ಇತಿಹಾಸದಲ್ಲಿ ಇನ್ನೂ ಮುಂದೆ, ಪ್ರತಿ ವರುಷ ಮರೆಯದಂತಹ ಕಹಿನೆನಪನ್ನು ಮರುಕಳಿಸುತ್ತ ಇರುತ್ತದೆ,
ನವೀನ ಹೆಚ್ಎ ಹನುಮನಹಳ್ಳಿ
ಅಂಕಣಕಾರರು ಲೇಖಕರು
ಕೆಆರ್ ನಗರ