ಶಿಕ್ಷಣಿಕ ಪ್ರವಾಸಕ್ಕೆ (Educational tour) ಎಂದು ಬಂದಿದ್ದ ವಿದ್ಯಾರ್ಥಿಗಳ ಪೈಕಿ ನಿನ್ನೆ ನಾಲ್ವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಆದ್ರೆ ನೆನ್ನೆ ಕೇವಲ ಓರ್ವ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿತ್ತು. ಉಳಿದವರಿಗಾಗಿ ಹುಡುಕಾಟ ಮುಂದುವರೆಸಲಾಗಿತ್ತು.
ಇದೀಗ ಮುರುಡೇಶ್ವರ ಬೀಚ್‌ನಲ್ಲಿ (Murudeshwar beach) ಸಮುದ್ರಪಾಲಾಗಿ ಕಣ್ಮರೆಯಾಗಿದ್ದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದೆ. ಮೂವರು ವಿದ್ಯಾರ್ಥಿಗಳಾದ ದೀಕ್ಷಾ,ಲಾವಣ್ಯ ಹಾಗೂ ವಂದನಾ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.
ಕೋಲಾರ (Kolar) ಜಿಲ್ಲೆಯ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai) ಸುಮಾರು 47 ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ಈ ಪ್ರವಾಸಕ್ಕೆ ಬಂದಿದ್ದರು. ಆ ವೇಳೆ ಈ ಘೋರ ದುರಂತ ಸಂಭವಿಸಿದೆ .