
ಹೊಸ ಕಾನೂನಿನಡಿ ಸೆಕ್ಷನ್ ಗಳನ್ನ ದಾಖಲಿಸಿಕೊಳ್ಳುವಾಗ ಸರಿಯಾಗಿ ತಿಳಿದು ಪ್ರಕರಣ ದಾಖಲಿಸಿಕೊಳ್ಳಿ: ನಗರ ಪೊಲೀಸ್ ಆಯುಕ್ತ ದಯಾನಂದ.
ಜುಲೈ 1ರಿಂದ ದೇಶದಲ್ಲಿ ಮೂರು ಹೊಸ ಕಾನೂನುಗಳು ಅನುಷ್ಠಾನಗೊಂಡಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ (ಬಿಎನ್ಎಸ್) ಪ್ರಕರಣಗಳು ದಾಖಲಾಗುತ್ತಿವೆ. ಹೊಸ ಕಾನೂನುವಾಗಿದ್ದರಿಂದ ಸೂಕ್ತ ತರಬೇತಿ ಪಡೆದರೂ ಪೊಲೀಸರಿಗೆ ಗೊಂದಲವಾಗುತ್ತಿದೆ. ಹೀಗಾಗಿ ಸೆಕ್ಷನ್ ದಾಖಲಿಸುವಾಗ ಸರಿಯಾಗಿ ತಿಳಿದುಕೊಂಡು ಪ್ರಕರಣ ದಾಖಲಿಸಿಕೊಳ್ಳಿ ಎಂದು ಸಿಬ್ಬಂದಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮೌಖಿಕ ಸೂಚನೆ ನೀಡಿದ್ದಾರೆ.
ಐಪಿಸಿ ಹಾಗೂ ಸಿಆರ್ ಪಿಸಿ ಕಾಯ್ದೆಗೆ ಪರ್ಯಾಯವಾಗಿ ಬಿಎನ್ ಎಸ್, ಬಿಎನ್ ಎಸ್ ಎಸ್ ಕಾಯ್ದೆಗಳು ದೇಶದಲ್ಲಿ ಜಾರಿಗೊಂಡಿವೆ. ಇದರ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಹೊಸ ಕಾನೂನುವಾಗಿದ್ದರಿಂದ ಕೆಳ ಹಂತದ ಪೊಲೀಸ್ ಸಿಬ್ಬಂದಿಗೂ ಗೊಂದಲವಾಗುತ್ತಿದೆ. ಈ ರೀತಿ ಗೊಂದಲವಾಗದಂತೆ ಪ್ರತ್ಯೇಕ ಪೊಲೀಸ್ ಆ್ಯಪ್ ರಚಿಸಲಾಗಿದೆ. ಹೀಗಿದ್ದರೂ ಕೆಲ ಸಂದರ್ಭಗಳಲ್ಲಿ ಗೊಂದಲ ಉಂಟಾದರೆ ಪರಿಣಿತರ ನುರಿತ ವಕೀಲರು ಅಥವಾ ಪಬ್ಲಿಕ್ ಪ್ರಾಸಿಕ್ಯೂಟರ್ ಬಳಿ ಕೇಳಿ ಸೆಕ್ಷನ್ ಗಳ ಬಗ್ಗೆ ಕೇಳಿ ತಿಳಿದು ಪ್ರಕರಣ ದಾಖಲಿಸುವಂತೆ ಆಯುಕ್ತರು ಸಲಹೆ ನೀಡಿದ್ದಾರೆ.

ಆರೋಪಿಗಳ ಮೇಲೆ ಬರುವುದು ಆರೋಪಗಳಷ್ಟೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಬಳಿಕವಷ್ಟೆ ಸೆಕ್ಷನ್ ಗಳನ್ನ ನಮೂದಿಸಿ. ಉದ್ದೇಶಪೂರ್ವಕವಲ್ಲದಿದ್ದರೂ ತಪ್ಪಾಗಿ ಸೆಕ್ಷನ್ ಹಾಕಿದರೆ ಆರೋಪಿಗೂ ತೊಂದರೆಯಾಗಬಹುದು. ಆರೋಪಿ ಅಪರಾಧ ಮಾಡದಿದ್ದಲ್ಲಿ ಆ ಸೆಕ್ಷನ್ ಗಳನ್ನ ಬಳಕೆ ಮಾಡಿದಲ್ಲಿ ತೊಂದರೆಗಳಾಗಬಹುದು. ಹೀಗಾಗಿ ಜನರಿಗೆ ನ್ಯಾಯ ಸಿಗುವ ಉದ್ದೇಶದಿಂದ ಸರಿಯಾಗಿ ತಿಳಿದುಕೊಂಡು ಪ್ರಕರಣ ದಾಖಲಿಸಿಕೊಳ್ಳಬೇಕು. ಸಹಜವಾಗಿ ಹೊಸ ಕಾಯ್ದೆಗಳು ಪೊಲೀಸರಿಗೂ ಕೂಡ ಕನ್ಪ್ಯೂಸ್ ಆಗಬಹುದು ಇದು ತಪ್ಪು ಎಂದಲ್ಲ .. ತರಬೇತಿ ಪಡೆದರೂ ಕೂಡ ಕೆಲ ಸಂದರ್ಭಗಳಲ್ಲಿ ಅಧ್ಯಯನ ನಡೆಸಬೇಕಾಗುತ್ತೆ. ಹೀಗಾಗಿ ತಜ್ಞರೊಂದಿಗೆ ಕೇಳಿ ತಿಳಿದುಕೊಂಡು ಹೊಸ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆಯುಕ್ತರು ಕಿವಿಮಾತು ಹೇಳಿದ್ದಾರೆ.