ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳು ಅಧಿಕಾರಕ್ಕೆ ಬಂದಿವೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ರಾಜ್ಯದ ಸಿಎಂ ಆಗಿ ಕೆಲಸ ಮಾಡಿದ್ದಾರೆ. ಬಂದು ಹೋದ ಎಲ್ಲಾ ಮುಖ್ಯಮಂತ್ರಿಗಳು ಎಂದೂ ರಾಜ್ಯದಲ್ಲಿರುವ ಮೂರು ತನಿಖಾ ತಂಡಗಳನ್ನು ಬಲಪಡಿಸುವ ಕೆಲಸ ಮಾಡಿಲ್ಲ. ಬದಲಿಗೆ ಇನ್ನೂ ಮೂರು ತನಿಖಾ ಸಂಸ್ಥೆಗಳ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡರು ಎಂದರೆ ಅತಿಶೋಯಕ್ತಿಯಾಗಲಾರದು.
ಹೌದು, ರಾಜ್ಯದ ಮೂರು ತನಿಖಾ ತಂಡಗಳು ಎಂದೋ ಬಲವನ್ನ ಕಳೆದುಕೊಂಡಿವೆ. ಇದರಿಂದ ರಾಜಕಾರಣಿಗಳ ಮುಂದೆ ಈ ಮೂರು ತನಿಖಾ ತಂಡಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಹಾಗಾಗಿ ಐಎಸ್ಡಿ (Internal Security Division), ಐಬಿ (Intelligence Bureau) ಹಾಗೂ SWAT (Special Weapons and Tactics) ಸಂಸ್ಥೆಗಳನ್ನ ಬಲಪಡಿಸಬೇಕು ಎಂಬ ಮಾತುಗಳು ಕೇಳಿ ಬಂದಿವೆ.
ಮೂರು ತನಿಖಾ ಸಂಸ್ಥೆಗಳು ನಾಮಕಾವಸ್ತೆಗಷ್ಟೇ ಇವೆ, ಯಾವುದೇ ಮೂಲ ಸೌಕರ್ಯಗಳಿಲ್ಲ ಎಂದು ಹಿರಿಯ ಅಧಿಕಾರಿಗಳು ಆರೋಪಿಸಿದ್ದಾರೆ. ಆದ್ದರಿಂದಲೇ ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳು ನಡೆಸುವ ಯಾರಿಗೂ ಭಯವಿಲ್ಲ ಎನ್ನಲಾಗುತ್ತಿದೆ.
ಇದುವರೆಗೂ ಕರ್ನಾಟಕದಲ್ಲಿ 2016-21ರವರೆಗೆ NIA 15 ಕೇಸ್ ದಾಖಲಿಸಿದೆ. ಈ ಸಂಬಂಧ ಕೇವಲ 31 ಆರೋಪಿಗಳನ್ನು ಬಂಧಿಸಿದೆ. 15 ಆರೋಪಿಗಳನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಜೈಲಿಗೆ ಕಳಿಸಿದೆ. 305 ಆರೋಪಿಗಳ ವಿರುದ್ಧ ಆರೋಪ ಸಾಬೀತು ಪಡಿಸುವ ಮೂಲಕ NIA ಕರ್ನಾಟಕ ಸ್ಲೀಪರ್ ಸೆಲ್ ಆಗಿದೆ.

ನೆರೆರಾಷ್ಟ್ರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಹಾವಳಿ ಜೋರಾಗಿದೆ. ಯಾವಾಗ ಬೇಕಾದರೂ ಭಾರತದ ಮೇಲೆ ಇವರ ದಾಳಿ ನಡೆಯಬಹುದು. ಒಂದು ವೇಳೆ ರಾಜ್ಯದಲ್ಲೂ ಉಗ್ರರ ಚಟುವಟಿಕೆ ನಡೆಯುವುದಾದಲ್ಲಿ ಇವರನ್ನು ಪತ್ತೆಹಚ್ಚಬೇಕಾಗುತ್ತದೆ. ಆದರೆ, ನಮ್ಮಲ್ಲಿ ಉಗ್ರರ ವಿರುದ್ಧ ರಾಜ್ಯದ ತನಿಖಾ ಸಂಸ್ಥೆಗಳು ಅಷ್ಟೊಂದು ಬಲವಾಗಿಲ್ಲ. ಆದ್ದರಿಂದ ಇದಕ್ಕಾಗಿ ಒಂದು ಪ್ರತ್ಯೇಕ ತನಿಖಾ ಸಂಸ್ಥೆ ಸ್ಥಾಪಿಸಿ ಅದಕ್ಕೆ NIA ಮಾದರಿಯಲ್ಲಿ ಟ್ರೈನಿಂಗ್ ನೀಡಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ ಹಿರಿಯ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಐಎಸ್ಡಿ (Internal Security Division), ಐಬಿ (Intelligence Bureau) ಹಾಗೂ SWAT (Special Weapons and Tactics) ಎಂಬ ಮೂರು ತನಿಖಾ ಸಂಸ್ಥೆಗಳಿವೆ. ಇವು ಗೌಪ್ಯ ಮಾಹಿತಿ ಸಂಗ್ರಹಕ್ಕಷ್ಟೇ ಸೀಮಿತವಾಗಿವೆ. ಯಾವ ಸಂಸ್ಥೆಗೂ ಪೂರ್ಣ ಪ್ರಮಾಣದ ತನಿಖಾ ಬಲವಿಲ್ಲ. ಯಾವುದೇ ಸೌಕರ್ಯ ಇಲ್ಲ. ಆದ ಕಾರಣ ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮೂರು ತನಿಖಾ ತಂಡಗಳಿಗೂ ಉತ್ತಮ ಸೌಕರ್ಯ ನೀಡಬೇಕು. ಎಲ್ಲರಿಗೂ ಕಮಾಂಡೋ ತರಬೇತಿ ನೀಡಬೇಕು. ಕಂಪ್ಯೂಟರ್, ಸ್ಯಾಟಲೈಟ್ ಬಳಕೆಯ ತರಬೇತಿ ನೀಡಬೇಕು. ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದ ಹಾಗೇ ಸಂಪೂರ್ಣ ಸಾಮರ್ಥ್ಯವುಳ್ಳ ಭ್ರಷ್ಟಾಚಾರ ನಿಗ್ರಹ ದಳ ಕಟ್ಟಬೇಕು ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯದ ತನಿಖಾ ತಂಡಗಳು ದೇಶದಲ್ಲಿರುವ ಎಲ್ಲಾ ಉಗ್ರರ ಗುಂಪುಗಳ ಮಾಹಿತಿ ಕಲೆ ಹಾಕಬೇಕು. ದೇಶಕ್ಕೆ ಮಾರಕವಾದವರ ಚಟುವಟಿಕೆಗಳನ್ನು ಗಮನಿಸಬೇಕು. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಬೇಕು. ಆಧುನಿಕ ಸಲಕರಣೆ ನೀಡಿ ಸನ್ನದ್ಧಗೊಳಿಸಬೇಕು ಎಂದು ಬಸವರಾಜ್ ಬೊಮ್ಮಾಯಿಗೆ ಒತ್ತಡ ಹಾಕಿದ್ದಾರೆ ಎನ್ನುತ್ತಿವೆ ಮೂಲಗಳು.






