ಬೆಲ್ಲಿ ಫ್ಯಾಟ್ ಇದೊಂದು ಕಾಮನ್ ಸಮಸ್ಯೆ ಪ್ರತಿಯೊಬ್ಬರಲ್ಲೂ ಕೂಡ ಹೊಟ್ಟೆಯ ಭಾಗದಲ್ಲಿ ಕೊಲೆಸ್ಟ್ರಾಲ್ ಅಂಶ ಇರುತ್ತೆ.. ಆದರೆ ಕೆಲವರಿಗೆ ಹೆಚ್ಚಿರುತ್ತೆ ಕೆಲವರಿಗೆ ಕಡಿಮೆ ಇರುತ್ತೆ ..ಇನ್ನು ಕೆಲವರು ಅದನ್ನ ಮೇಂಟೇನ್ ಕೂಡ ಮಾಡ್ತಾರೆ ಸೊ ಬೆಲ್ಲಿ ಫ್ಯಾಟ್ ಹೆಚ್ಚಿರೋರು ಏನೆಲ್ಲಾ ಮಾಡಬಹುದು ಹೇಗೆ ಹೊಟ್ಟೆಯ ಕೊಲೆಸ್ಟ್ರಾಲನ್ನು ಕಡಿಮೆ ಮಾಡಬಹುದು ಅನ್ನುವುದರ ಡೀಟೇಲ್ಸ್ ಹೀಗಿದೆ..
ಉಗುರು ಬೆಚ್ಚ ನೀರು
ಬೆಲ್ಲಿ ಫ್ಯಾಟಿಂದ ನಿಮಗೆ ಮುಕ್ತಿ ಸಿಗಬೇಕು ಅಂತ ಹೇಳಿದ್ರೆ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚನೆಯರಿಗೆ 2 tbsp ಅಷ್ಟು ನಿಂಬೆ ರಸವನ್ನು ಹಾಕ್ಬಿಟ್ಟು ಕುಡಿಬೇಕು.. ಜೊತೆಗೆ ಪ್ರತಿದಿನ ನೀವು ಹೆಚ್ಚಿನ ಮಟ್ಟದಲ್ಲಿ ನೀರನ್ನು ಕುಡಿಯುವುದರಿಂದ ಬೆಲ್ಲಿ ಫ್ಯಾಟ್ ತಕ್ಷಣವೇ ಕಡಿಮೆ ಆಗುತ್ತೆ ಅದರಲ್ಲೂ ಕೂಡ ಉಗುರು ಬೆಚ್ಚ ನೀರು ಅಥವಾ ಬಿಸಿ ನೀರನ್ನ ನೀವು ಕುಡಿಬೇಕು..
ವ್ಯಾಯಾಮ
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಅಥವಾ ಸಂಜೆಯ ಸಮಯದಲ್ಲಿ ವ್ಯಾಯಾಮವನ್ನು ಮಾಡಬೇಕು.ಎಕ್ಸರ್ಸೈಜ್ ಮಾಡುವುದರಿಂದ ನಾವು ತಿಂದ ಆಹಾರ ಚೆನ್ನಾಗಿ ಡೈಜೆಸ್ಟ್ ಆಗುತ್ತೆ ಹಾಗೂ ಬೆಲ್ಲಿ ಫ್ಯಾಟ್ ಆಗಿರಬಹುದು ಅಥವಾ ಎಕ್ಸ್ಟ್ರಾ ಕೊಲೆಸ್ಟ್ರಾಲ್ ಕಡಿಮೆ ಆಗ್ತಾ ಹೋಗುತ್ತೆ..
ಬ್ಯಾಲೆನ್ಸ್ ಡಯಟ್
ಬೆಲ್ಲಿ ಫ್ಯಾಟ್ ಹಾಗೂ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಳ್ಳಬೇಕು ಅಂದ್ರೆ ಬ್ಯಾಲೆನ್ಸ್ ಡಯಟ್ ತುಂಬಾನೇ ಮುಖ್ಯ..ನಿಯಮಿತವಾದ ಆಹಾರವನ್ನು ಸೇವನೆ ಮಾಡಬೇಕು ಹಾಗೂ ನಿಮ್ಮ ಆಹಾರದಲ್ಲಿ ಹಣ್ಣು ತರಕಾರಿಗಳು ಹಾಗೂ ಮೊಳಕೆ ಕಾಳುಗಳು ಹೆಚ್ಚಿರಬೇಕು ..ಇದರ ಜೊತೆಗೆ ಸಕ್ಕರೆ ಆಗಿರಬಹುದು, ಸ್ವೀಟ್ಸ್ ಆಗಿರಬಹುದು ನಾವು ತಿನ್ನೋದನ್ನ ತಕ್ಕಮಟ್ಟಿಗೆ ಕಡಿಮೆ ಮಾಡಬೇಕು..
ಗ್ರೀನ್ ಟೀ
ಗ್ರೀನ್ ಟೀಯನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಹಾಗೂ ಫ್ಯಾಟ್ ಅಂಶ ಕಡಿಮೆ ಆಗುತ್ತದೆ.. ಆಂಟಿ ಆಕ್ಸಿಡೆಂಟ್ ಅಂಶ ಜಾಸ್ತಿ ಇರುತ್ತದೆ.. ನಮ್ಮ ದೇಹದಲ್ಲಿರುವಂತಹ ಫ್ಯಾಟ್ ಹಾಗೂ ವೈಟನ್ನು ಬರ್ನ್ ಮಾಡೋದಕ್ಕೆ ಸಹಾಯ ಮಾಡುತ್ತದೆ ಹಾಗೂ ಕಂಪ್ಲೀಟ್ ಬಾಡಿಯನ್ನು ಡಿಟಾಕ್ಸ್ ಮಾಡುತ್ತದೆ..
ಒಟ್ಟಲಿಗೆ ಹೇಳೋದಾದ್ರೆ ಬೆಲ್ಲಿ ಫ್ಯಾಟ್ ಇದ್ದರೆ ಒಂದು ರೀತಿಯ ಮುಜುಗರ.. ಯಾವುದೇ ಒಂದು ಬಟ್ಟೆಯನ್ನು ಹಾಕುವುದಕ್ಕೂ ಕೂಡ ಸ್ವಲ್ಪ ಹಿಂಜರಿತೀವಿ ,ಲೂಸ್ ಆಗಿರುವಂತ ಬಟ್ಟೆಗಳನ್ನ ಧರಿಸ್ತೀವಿ. ಫ್ಯಾಟ್ ಕಡಿಮೆ ಆದರೆ ನಮ್ಮ ಹೃದಯದ ಆರೋಗ್ಯಕ್ಕೂ ಹಾಗೂ ದೇಹದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು..