
ಕೋಲಾರದಲ್ಲಿ ಈಡುಗಾಯಿ ಹೊಡೆದು ಚಳವಳಿಗೆ ಚಾಲನೆ ನೀಡಿದ ವಾಟಾಳ್ ನಾಗರಾಜ್,
ಕೋಲಾರದಲ್ಲಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹೇಳಿಕೆ,
ಸಮಗ್ರ ಕನ್ನಡಿಗರ ಜಯಕ್ಕಾಗಿ ಕನ್ನಡಿಗರ ಹಿತಕ್ಕಾಗಿ ಏಪ್ರಿಲ್ 26 ರಿಂದ ರಾಜ್ಯಾದ್ಯಂತ ಈಡುಗಾಯಿ ಚಳುವಳಿ,
ವಾಟಾಳ್ ಪಕ್ಷದಿಂದ ಸಮಗ್ರ ಕನ್ನಡಿಗರ ಜಯಕ್ಕಾಗಿ, ಕನ್ನಡಿಗರ ಹಿತಕ್ಕಾಗಿ ಈಡುಗಾಯಿ ಒಡೆಯುತ್ತೇವೆ.
ಇಡೀ ರಾಜ್ಯಾದ್ಯಂತ ಎರಡು ಕೋಟಿ ಈಡುಗಾಯಿ ಒಡೆಯುತ್ತೇವೆ.
ಮನೆಯಲ್ಲಿ, ಹೋಟೆಲ್, ಮಸೀದಿ. ರಸ್ತೆ, ದೇಗುಲದಲ್ಲಿ ಒಡೆಯಬಹುದು. ಜಿಲ್ಲೆಯಲ್ಲೂ ಹೆಚ್ಚಿನ ಈಡುಗಾಯಿ ಒಡೆಯುವ ಚಳವಳಿ ನಡೆಯಲಿದೆ.
ಬೇಡಿಕೆಗಳು ಹಿಂದೆ ಬಿದ್ದೆವೆ. ಸಮಗ್ರ ಕನ್ನಡ ಬೆಳವಣಿಗೆ ಗಡುನಾಡು, ಹೊರನಾಡಿನ ಬಗ್ಗೆ ಪ್ರಮಾಣಿಕ ಚಿಂತನೆ ಆಗುತ್ತಿಲ್ಲ. ರಾಜ್ಯದ ನೀರಾವರಿ, ಹೆದ್ದಾರಿ, ಅನುದಾನದ ಬಗ್ಗೆ, ಮಲತಾಯಿ ಧೋರಣೆ ಬಗ್ಗೆ ಯಾರೂ ಲೋಕಸಭೆಯಲ್ಲಿ ಮಾತನಾಡಿಲ್ಲ,
ಕೋಲಾರದಲ್ಲಿ ಸಾಂಕೇತಿಕವಾಗಿ ಈಡುಗಾಯಿ ಹೊಡೆದು ಚಳುವಳಿಗೆ ಚಾಲನೆ ನೀಡಿದ ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್,