ಕಾಂಗ್ರೆಸ್(congress) ಕೊನೆಗೂ ರಾಜ್ಯಕ್ಕೆ ತನ್ನ ಎರಡನೇ ಪಟ್ಟಿಯನ್ನು (second list ) ರಿಲೀಸ್ ಮಾಡಿದೆ. ಅಳೆದು ತೂಗಿ ಗೆಲ್ಲುವ ಕುದುರೆಗಳನ್ನು ಅಖಾಡಕ್ಕಿಳಿಸೋ ಬಗ್ಗೆ ಚರ್ಚೆ ಮುಗಿದು ಪಟ್ಟಿಯೂ ರಿಲೀಸ್ ಆಗಿದೆ. ಈ ಮುಂಚೆ ನಿರೀಕ್ಷೆ ಮಾಡಿದ್ದ ಹಾಗೇ ಸಚಿವರ(ministers) ಮಕ್ಕಳಿಗೆ ಅತಿ ಹೆಚ್ಚು ಟಿಕೆಟ್ ಸಿಕ್ಕಿದೆ. ಇದೀಗ ಮಕ್ಕಳನ್ನು ಗೆಲ್ಲಿಸುವ ಜವಾಬ್ದಾರಿ ಸಚಿವರ ಹೆಗಲಮೇಲಿದೆ.
ಕಾಂಗ್ರೆಸ್ ನ ಎರಡನೇ ಪಟ್ಟಿಯಲ್ಲಿ (Congres’s second list ) ಯಾವ ಯಾವ ಕ್ಷೇತ್ರಗಳಿಗೆ ಯಾವ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ ಅಂತ ನೋಡೋದಾದ್ರೆ.. ಬಾಗಲಕೋಟೆ ಕ್ಷೇತ್ರಕ್ಕೆ ಸಂಯುಕ್ತ ಪಾಟೀಲ್, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮನ್ಸೂರ್ ಅಲಿ ಖಾನ್, ವಿನೋದ್ ಹಸೂಟಿ ಧಾರವಾಡ ಕ್ಷೇತ್ರದಿಂದ, ಚಿತ್ರದುರ್ಗ ಕ್ಕೆ ಚಂದ್ರಪ್ಪ, ಇನ್ನು ಉಡುಪಿ ಇಂದ ಜಯಪ್ರಕಾಶ್ ಹೆಗ್ಡೆ, ದಕ್ಷಿಣ ಕನ್ನಡ ಕ್ಷೇತ್ರದಿಂದ ಪದ್ಮರಾಜ್, ರಾಯಚೂರು ಕಣದಿಂದ ಕುಮಾರನಾಯ್ಕ್, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸೌಮ್ಯ ರೆಡ್ಡಿ, ಹಾಗೆ ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್, ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮಣ್ ,ಬೆಂಗಳೂರು ಉತ್ತರ ರಾಜೀವ್ ಗೌಡ, ಬೀದರ್ ನಿಂದ ಸಾಗರ್ ಖಂಡ್ರೆ, ಬೆಳಗಾವಿಯಿಂದ ಮೃಣಾಳ್ ಹೆಬ್ಬಾಳ್ಕರ್, ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಾಂಕಾ ಜಾರಕಿಹೊಳಿ, ಗುಲಬರ್ಗಾಗೆ ರಾಧಾಕೃಷ್ಣ ಅಭ್ಯರ್ಥಿಯಾದ್ರೆ, ಕೊಪ್ಪಳಕ್ಕೆ ರಾಜಶೇಖರ ಹಿಟ್ನಾಳ, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ ಹೆಸರುಗಳು ಅಂತಿಮವಾಗಿದೆ .
ರಾಜ್ಯದಲ್ಲಿ 20 ಸ್ಥಾನ (20 seats) ಗೆಲ್ಲಬೇಕು ಎಂಬ ಟಾರ್ಗೆಟ್ ಕಾಂಗ್ರೆಸ್ ನಾಯಕರಿಗಿದ್ದು , ಆಯ್ಕೆಗಳಿರುವ ಪೈಕಿ ಉತ್ತಮ ಆಯ್ಕೆಯನ್ನೇ ಮಾಡಿದ್ದರೆ ಎನ್ನಬಹುದು. ಇನ್ನೇನಿದ್ರೂ ಸಚಿವರ ದಂಡು(Ministers), ಕ್ಷೇತ್ರದ ಕಾರ್ಯಕರ್ತು (party workers) ತಮ್ಮ ಜವಾಬ್ದಾರಿಯನ್ನು ಹೊತ್ತು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕಿದೆ. ಬಿಜೆಪಿ ಮತ್ತು ಕಾಂಗ್ರೆಸ್ (BJP & congress) ಎರಡೂ ಪಕ್ಷದ ಅಭ್ಯರ್ಥಿಗಳನ್ನು ಗಮನಿಸುತ್ತಿದ್ರೆ ಈ ಬಾರಿ ಹಲವು ಕ್ಷೇತ್ರಗಳಲ್ಲಿ ಜಿದ್ದಾ-ಜಿದ್ದಿನ ಸ್ಪರ್ಧೆ ಏರ್ಪಡೊದ್ರಲ್ಲಿ ಅನುಮಾನವೇ ಇಲ್ಲ .