ಬೆಂಗಳೂರು: ಕರ್ನಾಟಕ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆಯು ರಾಜ್ಯದಲ್ಲಿ ಗಣೇಶ ಚತುರ್ಥಿ ಹಬ್ಬವನ್ನು 5 ದಿನಗಳ ಕಾಲ ಆಚರಿಸಲು ಅನುಮತಿ ನೀಡಿದೆ. ಕೋವಿಡ್ – 19 ಸೋಂಕಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಶೇಕಡಾ 2%ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಸರ್ಕಾರ ಭಾನುವಾರ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲು ಕೆಲ ನಿರ್ಬಂಧಗಳನ್ನು ವಿಧಿಸಿ ಅನುಮತಿ ಕೊಟ್ಟಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕಾರಿಗಳು, ಆರೋಗ್ಯ ಸಚಿವರು, ಸಂಪುಟದ ಇತರೆ ಸಚಿವರು ಹಾಗೂ ತಜ್ಙರ ಜೊತೆ ಸಿಎಂ ಬೊಮ್ಮಾಯಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಸಭೆ ನಡೆಸಿದ ನಂತರ, ಕೋವಿಡ್ – 19 ಸೋಂಕಿನ ಪ್ರಮಾಣವು ಶೇಕಡಾ 2%ಕ್ಕಿಂತ ಕಡಿಮೆ ಇರುವ ಜೆಲ್ಲೆಗಳಿಗೆ ಮಾತ್ರ ಆಚರಣೆಗೆ ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ಹಬ್ಬದ ಆಚರಣೆನೆಯನ್ನು ಐದು ದಿನಗಳವರೆಗೆ ಮಾತ್ರ ಆಚರಿಸಲು ಅನುಮತಿಸಲಾಗಿದ್ದು, ಕೇವಲ 20 ಜನರಿಗೆ ಮಾತ್ರ ವಿಗ್ರಹದ ಮುಂದೆ ಸೇರಲು ಅವಕಾಶ ನೀಡಲಾಗಿದೆ. ರಾತ್ರಿ 9 ರ ನಂತರ ಯಾವುದೇ ಆಚರಣೆಗೆ ಅವಕಾಶವಿಲ್ಲ ಮತ್ತು ಕಟ್ಟುನಿಟ್ಟಿನ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಹಬ್ಬವನ್ನು ಆಚರಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದ ಪ್ರಕಾರ, ಹಬ್ಬದ ಆಚರಣೆಯ ಸಮಯದಲ್ಲಿಯೂ ಸಹ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹಬ್ಬದ ಆಚರಣೆಯ ಸಂಭ್ರಮದಲ್ಲಿ ಕೋವಿಡ್ – 19 ಮಾರ್ಗಸೂಚಿಗಳನ್ನು ಪಾಲಿಸುವುದು ಮತ್ತು ಸ್ವಚ್ಚತೆಯನ್ನು ಕಾಪಾಡಿ ಕೊಳ್ಳುವುದನ್ನು ಮರೆಯಬಾರದು ಎಂದು ಸರ್ಕಾರ ಸೂಚನೆ ನೀಡಿದೆ.
ಶಾಲೆಗಳಲ್ಲಿ ನಡೆಯುವ ಆಚರಣೆಗಳು, ಡಿಜೆ ಮತ್ತು ಮನರಂಜನೆ ಸೇರಿದಂತೆ ಅನೇಕ ಆಚರಣೆಗಳಿಗೆ ಕಡಿವಾಣ ಹಾಕಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ. “ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ಮಾತ್ರ ಅನುಮತಿಸಲಾಗುವುದು, 4 ಅಡಿಗಿಂತ ಹೆಚ್ಚು ಎತ್ತರದ ಗಣೇಶ ಮೂರ್ತಿಯನ್ನು ಸ್ಥಾಪಿಸಬಾರದು, 2 ಅಡಿಗಿಂತ ಹೆಚ್ಚು ಎತ್ತರದ ಗಣೇಶ ಮೂರ್ತಿಯನ್ನು ಮನೆಗಳಲ್ಲಿ ಸ್ಥಾಪಿಸಲು ಅವಕಾಶವಿರುವುದಿಲ್ಲ ಎಂದು ಆದೇಶಿದೆ. ಗಣಪತಿ ಮೆರವಣಿಗೆಗಳಿಗೆ ಈ ಬಾರಿ ಅವಕಾಶ ನೀಡಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಸ್ತುವಾಗಿ ರಾಜ್ಯದಲ್ಲಿ, ಒಟ್ಟು 17,746 ಸಕ್ರಿಯ ಕೋವಿಡ್ ಪ್ರಕರಣಗಳಿವೆ, 28,98,874 ಜನರು ಚೇತರಿಕೊಂಡಿದ್ದಾರೆ ಮತ್ತು 37,401 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ವರದಿ ನೀಡಿದೆ.