ಭ್ರಷ್ಟಾಚಾರದ ವಿವಾದದಲ್ಲಿ ಸಿಲುಕಿರುವ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ MDಯಾಗಿ ವರ್ಗಾವಣೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಕರ್ನಾಟಕ ಸರ್ಕಾರ ತಡೆ ನೀಡಿದೆ.
ಗುರುವಾರ ರವಿ ಡಿ ಚನ್ನಣ್ಣವರ್ ಸೇರಿ 9 ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿತ್ತು. ರವಿ ಅವರನ್ನು ಸಿಐಡಿಯಿಂದ ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ MDಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೀಗ, ಇದೀಗ ಕರ್ನಾಟಕ ಸರ್ಕಾರ ಏಕಾಏಕಿ ರವಿ ಡಿ ಚನ್ನಣ್ಣವರ್ ಅವರ ವರ್ಗಾವಣೆ ಆದೇಶವನ್ನು ತಡೆಯಿಡಿಲಾಗಿದೆ ಎಂದು ಸುತ್ತೋಲೆ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರವಿ ರವಿ ಡಿ ಚನ್ನಣ್ಣನವರ್ ವರ್ಗಾವಣೆಗೆ ಸರ್ಕಾರ ಬ್ರೇಕ್ ಹಾಕಿದೆ.
ಕೆಲವು ದಿನಗಳಿಂದ ರವಿ ಡಿ ಚೆನ್ನಣ್ಣವರ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ಗ್ರಾನೈಟ್ ಉದ್ಯಮಿಯೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಇವರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಪ್ರತಿ ಸಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೂಡಲೇ ವಿವಾದ ಸೃಷ್ಟಿಯಾಯಿತು. ಈ ಪ್ರಕರಣದ ಕುರಿತು ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಚನ್ನಣ್ಣವರ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ವರ್ಗಾವಣೆಯಾದ ಬೆನ್ನಲ್ಲೇ ರವಿ ಡಿ ಚನ್ನಣ್ಣವರ್ ಅವರ ರಾಜಕೀಯ ಪ್ರವೇಶ ಕುರಿತು ʼಪ್ರತಿದ್ವನಿʼ ಒಂದು ವಿಸ್ತೃತ ವರದಿ ಪ್ರಕಟಿಸಿತು. ಇದರ ಪ್ರತಿಫಲವೋ ಅಥವಾ ಕಾಕತಾಳಿಯವೋ ಸರ್ಕಾರ ಈಗ ರವಿ ಅವರ ವರ್ಗಾವಣೆಯನ್ನು ತಡೆ ಹಿಡಿದಿದೆ.







