
ಮಂಡ್ಯ:ಅ ಕ್ಟೋ ಬರ್ 28ನೇ ತಾರೀಖಿನಿಂದ ನವೆಂಬರ್ 3ನೇ ತಾರೀಖಿನವರೆಗೆ ಮಂಡ್ಯದಲ್ಲಿ ನಡೆದ ಯೋನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ U-19 ಮತ್ತು ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನಲ್ಲಿ ಕೊಡಗಿನ ಬೊಪ್ಪಂಡ ದಿಯಾ ಭೀಮಯ್ಯ ಸಿಂಗಲ್ಸ್ ಮತ್ತು ಮಿಶ್ರಡಬಲ್ಸ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
U-19 ವಿಭಾಗದಲ್ಲಿ 17ವರ್ಷದ ದಿಯಾ ಸಿಂಗಲ್ಸ್ ನಲ್ಲಿ ಪ್ರಥಮ ಶ್ರೇಯಾಂಕಿತ ರುಜುಲ ರಾಮು ಅವರೊಂದಿಗೆ 15-21,21-16,21-19 ಪರಾಭವಗೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಹಾಗೂ ಮಿಶ್ರಡಬಲ್ಸ್ ನಲ್ಲಿ ನಿಶ್ಚಲ್ ಎಸ್.ಅವರೊಂದಿಗೆ ಕೂಡಿ ಆಡಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.