ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಜಮಾಯಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿ, ಹತ್ತಾರು ಮಂದಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಬ್ಯಾರಿಕೇಡ್ ತಳ್ಳಿ ಒಮ್ಮೆಲೆ ನೂರಾರು ಭಕ್ತರು ನುಗ್ಗಿದ್ರಿಂದೆ ಈ ಘಟನೆ ಸಂಭವಿಸಿದೆ.. ಜನರನ್ನ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಮಾಡ್ತಿದ್ದಾರೆ.. ಅಸ್ವಸ್ಥರಾದ ಜನರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ.. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನಷ್ಟೆ ತಿಳಿಯಬೇಕಿದೆ.
ಮೌನಿ ಅಮಾವಾಸ್ಯೆ ಹಿನ್ನೆಲೆ ಪುಣ್ಯಸ್ನಾನಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು.. 5 ಕೋಟಿಗೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸುಮಾರು 4 ಕೋಟಿ 24 ಲಕ್ಷ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. 10 ಲಕ್ಷ ಸಾಧು ಸಂತರು ಪುಣ್ಯಸ್ನಾನ ಮಾಡಿದ್ದಾರೆ.. ಜನವರಿ 28 ರವರೆಗೆ ಒಟ್ಟು 19 ಕೋಟಿ 94 ಲಕ್ಷ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಅನ್ನೋ ಮಾಹಿತಿ9 ಸಿಕ್ಕಿದೆ. ಇಂದು ಒಟ್ಟು 10 ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ನಿರೀಕ್ಷೆ ಇದೆ.. ಕಾಲ್ತುಣಿತ ಪ್ರಕರಣದಿಂದ ಎಚ್ಚೆತ್ತ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಮೂಲಕ ಭಕ್ತರ ಮೇಲೆ ಕಣ್ಗಾವಲು ಇಡಲಾಗಿದೆ..
ಕುಂಭಮೇಳ ಪರಿಸ್ಥಿತಿ ಬಗ್ಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಗಾಳಿಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ.. ಪ್ರಧಾನಿ ನನಗೆ 4 ಬಾರಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.. ರಾಜ್ಯಪಾಲರು ಕೂಡ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.. ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ ಎಂದಿದ್ದಾರೆ.. ಪರಿಸ್ಥಿತಿ ನಿಯಂತ್ರಣದಲ್ಲಿದೆ ಯಾವುದೇ ಗೊಂದಲ ಭೇಡ ಎಂದು ಉತ್ತರ ಪ್ರದೇಶ ಸಿಎಂ ತಿಳಿಸಿದ್ದಾರೆ.. ಜನರ ಸಹಾಯಕ್ಕಾಗಿ ಅಧಿಕಾರಿಗಳಿದ್ದಾರೆ.. ನೀವು ಇರೋ ಕಡೆಯೇ ಪುಣ್ಯಸ್ನಾನ ಮಾಡಿ ಎಂದು ಕರೆ ನೀಡಿದ್ದಾರೆ.
ಮಹಾಕುಂಭಮೇಳದಲ್ಲಿ ಕಾಲ್ತುಳಿತ ಹಿನ್ನೆಲೆ ಸಂಗಮ್ ಘಾಟ್ನಲ್ಲಿ ಕೆಲಹೊತ್ತು ಪುಣ್ಯಸ್ನಾನ ಬಂದ್ ಮಾಡಲಾಗಿತ್ತು.. ಈಗ ಮತ್ತೆ ಅಮೃತ ಸ್ನಾನ ಶುರುವಾಗಿದೆ.. ಸಾಧುಗಳು, ಸ್ವಾಮೀಜಿಗಳು ಹಾಗೂ ಸಂತರು ಮತ್ತೆ ಸಂಗಮ್ ಘಾಟ್ನಲ್ಲಿ ಪುಣ್ಯಸ್ನಾನ ಮಾಡ್ತಿದ್ದಾರೆ.. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಬಿಗಿ ಭದ್ರತೆಯಲ್ಲಿ ಮತ್ತೆ ಸಾಧುಗಳು ಮೌನಿ ಅಮಾವಾಸ್ಯೆಯ ಪುಣ್ಯ ಸ್ನಾನ ಮಾಡ್ತಿದ್ದಾರೆ..