ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ ಸೋಮಶೇಖರ್ ( S.T Somashekar ) ಗೃಹಲಕ್ಷ್ಮಿ ( Gruhalakshmi scheme ) ಯೋಜನೆ ತಮ್ಮ ಕ್ಷೇತ್ರದಲ್ಲಿ ಉದ್ಘಾಟನೆಗೊಳಿಸಿ ಮತ್ತೊಮ್ಮೆ ಬಿಜೆಪಿ ( BJP ) ಪಾಳ್ಯದಲ್ಲಿ ಅಚ್ಚರಿಯನ್ನ ಹುಟ್ಟು ಹಾಕಿದ್ದಾರೆ
ಹೌದು ಇಷ್ಟು ದಿನಗಳ ಕಾಲ ಆಪರೇಷನ್ ಹಸ್ತದ ವಿಚಾರ ರಾಜ್ಯದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಹಸವಾಗಿತ್ತು ಈ ವಿಚಾರದ ಕುರಿತು ಬಿಜೆಪಿಯ ಹೈಕಮಾಂಡ್ ಕೂಡ ಈಗ ತಲೆ ಕೆಡಿಸಿಕೊಂಡಿದೆ ಇದರ ನಡುವೆ ಯಾರೆಲ್ಲಾ ಪಕ್ಷ ಬಿಟ್ಟು ಹೋಗುತ್ತಾರೋ ಅವರನ್ನೆಲ್ಲ ಕರೆದು ಮಾತನಾಡಿಸುವಂತೆ ಬಿಜೆಪಿ ಹೈಕಮಾಂಡ್ ಕರ್ನಾಟಕದ ಬಿಜೆಪಿಯ ನಾಯಕರುಗಳಿಗೆ ಸೂಚನೆಯನ್ನು ನೀಡಿದ್ದಾರೆ
ಕಳೆದ ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರುವುದು ಖಚಿತ ಎನ್ನಲಾಗಿತ್ತು ಬಳಿಕ ಬಸವರಾಜ್ ಬೊಮ್ಮಾಯಿ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಕೆಲ ಪ್ರಮುಖ ನಾಯಕರು ಎಸ್.ಟಿ ಸೋಮಶೇಖರ್ ಸೇರಿದಂತೆ ಹಲವು ಅಸಮಾಧಾನಿತ ಬಿಜೆಪಿ ಶಾಸಕರನ್ನ ಕರೆದು ಮಾತನಾಡಿಸಿದ್ರು
ಈ ವೇಳೆಯಲ್ಲಿ ಮಾತನಾಡಿದ ಶಾಸಕ ಎಸ್ ಟಿ ಸೋಮಶೇಖರ್ ನಾನು ಬಿಜೆಪಿ ಬಿಟ್ಟು ಹೋಗುವುದಕ್ಕಿಂತ ಬಿಜೆಪಿಯಲ್ಲಿ ಇರುವವರೇ ನನ್ನನ್ನ ಕಳುಹಿಸಲು ನೋಡುತ್ತಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು ಅದಾದ ಬಳಿಕ ಬಿಜೆಪಿಯ ಪ್ರಮುಖ ನಾಯಕರದ ಸಿ ಟಿ ರವಿ ಬಸವರಾಜ್ ಬೊಮ್ಮಾಯಿ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇನ್ನೂ ಹಲವು ನಾಯಕರು ಯಾರು ಕೂಡ ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದರು,
ಇದಾದ ನಂತರ ಎಲ್ಲವು ಸರಿದಾರಿಗೆ ಬರುತ್ತಿದೆ ಎನ್ನುವಷ್ಟರಲ್ಲಿ ಮತ್ತೊಮ್ಮೆ ಎಸ್ಟಿ ಸೋಮಶೇಖರ್ ಕಾಂಗ್ರೆಸ್ ನಾಯಕರ ನಿರಂತರ ಸಂಪರ್ಕದಲ್ಲಿರುವುದು ಹಲವು ನಾಯಕರುಗಳಿಗೆ ಅನುಮಾನ ಹುಟ್ಟು ಹಾಕಿತ್ತು ಇದೀಗ ಸರ್ಕಾರದ ಮಹತ್ವಕಾಂಕ್ಷಿಯ ನಾಲ್ಕನೇ ಗ್ಯಾರೆಂಟಿಯಾದ ಗ್ರಹಲಕ್ಷ್ಮಿ ಯೋಜನೆ, ಮೈಸೂರಿನಲ್ಲಿ ಅಧಿಕೃತವಾಗಿ ಅನುಷ್ಠಾನಗೊಂಡಿದೆ ಇದರ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರವಾದ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಎಸ್ ಟಿ ಸೋಮಶೇಖರ್ ಈಗ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ ಇದು ಬಿಜೆಪಿಗಳ ಅಚ್ಚರಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ
ಇನ್ನು ಈ ಕುರಿತು ಮಾತನಾಡಿರುವ ಎಸ್ ಟಿ ಸೋಮಶೇಖರ್ ಇದು ಸರ್ಕಾರದ ಕಾರ್ಯಕ್ರಮ ವಾಗಿದ್ದು ಪಕ್ಷಾತೀತವಾದ ಯೋಜನೆಯಾಗಿದೆ ಹಾಗಾಗಿ ಇದನ್ನ ಬೆಂಬಲಿಸುವುದು ಮುಖ್ಯ ಎಂದು ತೇಪೆ ಸರುವ ಕೆಲಸವನ್ನು ಮಾಡಿದ್ದಾರೆ ಆದರೆ ಪರೋಕ್ಷವಾಗಿ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರುವುದು ಈ ಮೂಲಕ ಖಚಿತವಾಗಿದೆ ಎನ್ನುತ್ತಿವೆ ಬಿಜೆಪಿಯ ಮೂಲಗಳು