ಬೆಂಗಳೂರು : 2022 – 23ನೇ ಶೈಕ್ಷಣಿಕ ವರ್ಷದ ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ರಾಜ್ಯದವು 89.98 ಪ್ರತಿಶತ ಫಲಿತಾಂಶವನ್ನು ದಾಖಲಿಸಿದೆ. 96.80 ಪ್ರತಿಶತ ಫಲಿತಾಂಶದ ಮೂಲಕ ಚಿತ್ರದುರ್ಗ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಮಂಡ್ಯ ಜಿಲ್ಲೆಯು 96.74 ಪ್ರತಿಶತ ಫಲಿತಾಂಶ ದಾಖಲಿಸುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 96.80 ಪ್ರತಿಶತ ಫಲಿತಾಂಶದ ಮೂಲಕ ಹಾಸನ ಜಿಲ್ಲೆಯು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.ಯಾದಗಿರಿ ಜಿಲ್ಲೆಯು ಈ ಬಾರಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ . ಬೆಳಗ್ಗೆ 11 ಗಂಟೆ ನಂತರ ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ (http://karresults.nic.in) ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ ,
ಚಿತ್ರದುರ್ಗ ಜಿಲ್ಲೆಯು 96.8 ಪ್ರತಿಶತ ಫಲಿತಾಂಶ ದಾಖಲು ಮಾಡಿದ್ದರೆ ಮಂಡ್ಯ ಜಿಲ್ಲೆಯು 96.74 ಪ್ರತಿಶತ ಫಲಿತಾಂಶ ಹಾಗೂ ಹಾಸನ ಜಿಲ್ಲೆಯು 96.68 ಶೇಕಡಾ ಫಲಿತಾಂಶ ದಾಖಲಿಸುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದೆ.ಇನ್ನುಳಿದಂತೆ 96.78 ಪ್ರತಿಶತ ಫಲಿತಾಂಶ ದಾಖಲಿಸಿದ ಬೆಂಗಳೂರು ಗ್ರಾಮಾಂತರ ನಾಲ್ಕನೇ ಸ್ಥಾನ, 96.15 ಪ್ರತಿಶತ ಫಲಿತಾಂಶದೊಂದಿಗೆ ಚಿಕ್ಕಬಳ್ಳಾಪುರ ನಾಲ್ಕನೇ ಸ್ಥಾನ , 94.6 ಪ್ರತಿಶತ ಮೈಸೂರು ಜಿಲ್ಲೆ, ಬೆಂಗಳೂರು ಪಶ್ಚಿಮ ಶೇ. 80.93 , ಬೆಂಗಳೂರು ದಕ್ಷಿಣ ಶೇ.78.95 ಯಾದಗಿರಿಗೆ ಕೊನೆಯ ಸ್ಥಾನ- ಶೇ.75.49 ಪಡೆದುಕೊಂಡಿದೆ.
ಈ ಬಾರಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ನಾಲ್ವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬೆಂಗಳೂರು ಹೊಸೂರು ರಸ್ತೆಯ ನ್ಯೂ ಮೆಕಾಲೆನಶಾಲೆಯ ಭೂಮಿಕಾ ಪೈ , ಚಿಕ್ಕಬಳ್ಳಾಪುರ ಜಿಲ್ಲೆ ಅಗಲಗುರ್ಕಿ ಬಿಜಿಎಸ್ ಶಾಲೆಯ ಯಶಸ್ ಗೌಡ, ಜಯಪುರ ಬೀಮನಗೌಡ ಪಾಟೀಲ್ವಿ ಹಾಗೂ ಸವದತ್ತಿ ಶ್ರೀ ಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್ ಹಿರೆಹೋಳಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.. .