ವಿಧಾನ ಪರಿಷತ್ ಸದಸ್ಯ ಅಂದ್ರೆ ನಾಮಕರಣ ಗೊಂಡ ಸದಸ್ಯ ಹೆಚ್.ವಿಶ್ವನಾಥ್ ನಾಮಕರಣ ಮಾಡಿ ಸಾರ್ಥಕಗೊಳಿಸಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ್‌ಪ್ರಸಾದ್ ಕಿಡಿಕಾರಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಎಂ.ಎಲ್.ಎ.ಗಳಿಂದ ಆಯ್ಕೆ ಆದವ್ರಲ್ಲ, ಮತದಾರರಿಂದ ವಿಶ್ವನಾಥ್ ಆಯ್ಕೆಯಾಗಿ ಎಂ ಎಲ್ ಸಿ ಆಗಿಲ್ಲ. ಇನ್ನು ಒಂದು ವರ್ಷ ಕಳೆದರೆ ನನ್ನ ಸಂಸತ್ ಸ್ಥಾನದ ಅವಧಿ ಮುಗಿಯುತ್ತದೆ ಮತ್ತು ನಾನು ರಾಜಕೀಯಕ್ಕೆ ಬಂದು 50 ವರ್ಷಗಳಾಗುತ್ತದೆ.
ಐದು ವರ್ಷ ಮುಖ್ಯಮಂತ್ರಿಯಾಗಿ ಪೂರೈಸಿ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಡುತ್ತಿದ್ದಾರೆ ಅವರೊಬ್ಬ ಅಲೆಮಾರಿ ಎಂದು ನಾನು ಹೇಳಿದ್ದೇನೆ ಅದೇ ರೀತಿ ವಿಶ್ವನಾಥ್‌ಗೂ ಹೇಳಿದ್ದೇನೆ.
ಬೊಗಳೊ ನಾಯಿ ಕಚ್ಚೋದಿಲ್ಲ ಅಂತಾರೆ ಆದ್ರೆ ವಿಶ್ವನಾಥ್ ಬೊಗಳುತ್ತಾರೆ, ಕಚ್ಚುತ್ತಾರೆ ಹೋದ ಕಡೆ ಎಲ್ಲ ವಿಶ್ವನಾಥ್ ಎಲ್ಲರ ಬಗ್ಗೆ ಮಾತನಾಡುತ್ತಾರೆ ಕೆ.ಆರ್.ನಗರಕ್ಕೆ ಮಂಚನಹಳ್ಳಿ ಮಹದೇವ್ ಬೇಡ ನನಗೆ ಟಿಕೆಟ್ ಕೊಡಿ ಎಂದು ಹೇಳಿದ್ರು ಏಟ್ರಿಯಾ ಹೋಟೆಲ್‌ನಲ್ಲಿ ನಾನು ಸಿದ್ದರಾಮಯ್ಯಗೆ ಹೇಳ್ದೆ ಇದೊಂದು ಬಾರಿ ಟಿಕೆಟ್ ಕೊಡಿ ಇಲ್ಲಾಂದ್ರೆ ಪಾಠ ಮಾಡೋಕೆ ಹೋಗ್ತೀನಿ ಎಂದು ಹೇಳಿದ್ದರು.

ಆದರೆ, ವಿಶ್ವನಾಥ್ ಸೋತ ನಂತರ ಪಾಠ ಮಾಡೋಕೆ ಹೋಗಿಲ್ಲ ಕೀಟಲೆ ಮಾಡೋಕೆ ಬಂದ್ರು ಆ ಮೇಲೆ ಎಂಪಿಗೆ ಟಿಕೆಟ್ ಕೊಟ್ರು ಸಿದ್ದರಾಮಯ್ಯ ದುಡ್ಡು ಖರ್ಚು ಮಾಡಿದ್ರು ನಾವೆಲ್ಲಾ ಓಡಾಡಿ ಎಂಪಿ ಮಾಡುದ್ವಿ. ಎಂಪಿ ಆದ್ಮೇಲೆ ಒಂದೇ ಒಂದು ಲೋಕಸಭೆಯಲ್ಲಿ ಪ್ರಶ್ನೆ ಹೇಳಲಿಲ್ಲ ಹೋಗೋದು ಅಲ್ಲಿ ಸಿಗ್ನೇಚರ್ ಹಾಕಿ ಮನೆಗೆ ಹೋಗಿ ರಾತ್ರಿ ವಿಸ್ಕಿ ಹಾಕೋದು ಮಲಗೋದು ಅಷ್ಟೇ ನಿನ್ನ ಕೆಲಸ ಎಂದು ವಿಶ್ವನಾಥ್ ವಿರುದ್ದ ಶ್ರೀನಿವಾಸ್ ಹರಿಹಾಯ್ದಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ 14-15 ಕೋಟಿ ತಗೊಂಡ್ರು ಕೇವಲ 4 ರಿಂದ 5 ಲಕ್ಷ ಖರ್ಚು ಮಾಡಿದ್ರು, 10 ಕೋಟಿ ಮನೆಗೆ ತಗೊಂಡು ಹೋದ್ರು ಪೆಟ್ರೋಲ್ ಬಂಕ್, ಬಾರ್ ಮಾಡ್ಕೊಂಡಿದ್ದು ಯಾರಪ್ಪ ಎಂದು ಪ್ರಶ್ನಿಸಿದ್ದಾರೆ.
ನಾನು ಜೆಡಿಎಸ್ ರಾಜ್ಯಾದ್ಯಕ್ಷ ಆದ್ರೂ ಕೆ.ಆರ್.ನಗರ ಪುರಸಭೆಗೆ ಒಂದೇ ಒಂದು ಟಿಕೇಟ್ ಕೊಟ್ಟಿಲ್ಲ ನನಗೆ ಅವಮಾನ ಮಾಡಿದ್ರು ಅಂತಾ ನನ್ನ ಮನೆಗೆ ಬಂದೆ ನಾನು ಯಡಿಯೂರಪ್ಪ ಅವ್ರತ್ರ ಒನ್ ಟು ಒನ್ ಮಾತನಾಡಿ ಎಂದೆ ಇಬ್ಬರೂ ಮಾತನಾಡಿದ್ರು, ಯಡಿಯೂರಪ್ಪ ಸೀನಿಯರ್ ಇದ್ದಾರೆ ಸೇರಿಸಿಕೊಳ್ಳೋಣ ಎಂದರು.
ವಿಶ್ವನಾಥ್‌ಗೆ ಕಾಂಗ್ರೆಸ್‌ನಿಂದ ಯಾವ ಅನ್ಯಾಯ ಆಗಿದೆ ಸೋತ ಮೇಲೆ ಸಿದ್ದರಾಮಯ್ಯ ಅವ್ರತ್ರ ದುಡ್ಡು ಕೇಳಿ, ಅಧಿಕಾರ ಕೇಳಿದ್ರು ಹೀಗಾಗಿಯೇ ವಿಶ್ವನಾಥ್ ಕಾಂಗ್ರೆಸ್ ಬಿಟ್ರು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ದ ಸಂಸದ ಶ್ರೀನಿವಾಸ್ ಪ್ರಸಾದ್ ಹರಿಹಾಯ್ದಿದ್ದಾರೆ.











