ರಾಜ್ಯದಲ್ಲಿ ಕಮಿಷನ್ ಆರೋಪ, PSI ಪರೀಕ್ಷೆಯಲ್ಲಿ ಅಕ್ರಮ ಸುದ್ದಿಯ ಬೆನ್ನಲ್ಲೇ ಈಗ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅಕ್ರಮವಾಗಿ ಎಂದು ಕೇಳಿ ಬಂದಿದೆ. ಈ ಕುರಿತು ವಿರೋಧ ಪಕ್ಷಗಳು ಸಾಲು ಸಾಲು ಆರೋಪಗಳನ್ನು ಮಾಡಿವೆ. ಇದಕ್ಕೆ ಸಂಬಂಧಿಸಿದಂತೆ ಈಗ ಒರ್ವ ಪ್ರಾಧ್ಯಾಪಕರನ್ನು ಕೆಲಸದಿಂದ ವಜಾ ಮಾಡಿದೆ.
ಹೌದು, ಸಹಾಯಕ ಪ್ರಾಧ್ಯಾಪಕ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀದೇವಿ ಅವರನ್ನು ವಜಾ ಮಾಡಲಾಗಿದೆ.
ಹೈಕೋರ್ಟ್ ವಿಭಾಗಯೀಯ ಪೀಠದಿಂದ ತೀರ್ಪು ಹಿನ್ನೆಲೆಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕಿ ಶ್ರೀದೇವಿ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
2014ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಯುಜಿಸಿ ನಿಯಮ ಗಾಳಿಗೆ ತೂರಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ನಡೆಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.