ಶ್ರೀಲಂಕಾದ ಅಧ್ಯಕ್ಷ ಗುಟಬಯ ರಾಜಪಕ್ಸೆ ಪ್ರತಿಭಟನಾಕಾರರ ದಾಳಿಗೆ ಬೆದರಿ ಪಲಾಯನ ಮಾಡುತ್ತಿದ್ದಂತೆ ಇತ್ತ ಪ್ರಧಾನಿ ಸ್ಥಾನಕ್ಕೆ ರಣಿಲ್ ವಿಕ್ರಂಸಿಂಘೆ ರಾಜೀನಾಮೆ ನೀಡಿದ್ದಾರೆ.
ಲಂಕಾದ ಅಧ್ಯಕ್ಷರ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದರಿಂದ ತುರ್ತು ಸಭೆ ಕರೆದಿದ್ದ ಪ್ರಧಾನಿ ರಣಿಲ್ ವಿಕ್ರಮಸಿಂಘೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಹೊಸ ಸರ್ಕಾರಕ್ಕೆ ದಾರಿ ಮಾಡಿಕೊಡುವ ಸಲುವಾಗಿ ನಾನು ರಾಜೀನಾಮೆ ಘೋಷಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.