ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಹಾಗೂ ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಜುಲೈ 28ರವರೆಗೆ ದೇಶ ತೊರೆಯದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಶ್ರೀಲಂಅಕದಲ್ಲಿ ಸದ್ಯ ತಲೆದೂರಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ಜಾಗತಿಕ ನಾಗರಿಕ ಸಮಾಜ ಸಂಸ್ಥೆ ಟ್ರಾನ್ಸಪರೆನ್ಸಿ ಇಂಟರ್ನ್ಯಾಷನಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಾದ ಪ್ರತಿವಾದವನ್ನು ಸುಧೀರ್ಘವಾಗಿ ಆಲಿಸಿದ ನಂತರ ಈ ಆದೇಶ ಹೊರಡಿಸಿದೆ.

ಶ್ರೀಲಂಕಾ ಸುಪ್ರೀಂ ಕೋರ್ಟ್
ಜೂನ್ 17ರಂದು ಸಲ್ಲಿಕೆಯಾಗಿದ್ದ ಅರ್ಜಿಯಲ್ಲಿ ರಾಜಪಕ್ಸೆ ಸಹೋದರರು, ಸೆಂಟ್ರಲ್ ಬ್ಯಾಂಕ್ ರಾಜ್ಯಪಾಲ ಅಜಿತ್ ನಿವಾರ್ದ್ ಕಬ್ರಾಲ್ ಹಾಗೂ ಮಾಜಿ ಖಜಾಂಜಿ ಎಸ್.ಆರ್. ಅಟ್ಟಿಗಾಲರನ್ನು ದೇಶ ತೊರೆಯದಂತೆ ನಿರ್ಬಂಧಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.
ಶ್ರೀಲಂಕಾದಲ್ಲಿ ಸದ್ಯ ಆರ್ಥಿಕ ಬಿಕ್ಕಟ್ಟಿಗೆ ಈ ವ್ಯಕ್ತಿಗಳೆ ನೇರ ಹೊಣೆ ಎಂದು ಅರ್ಜಿದಾರರು ಆರೋಪಿಸಿದ್ದರು.