ನವದೆಹಲಿ: 38 ವರ್ಷದ ಭಾರತೀಯ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರು ಬುಧವಾರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.ಆಸ್ಟ್ರೇಲಿಯಾದಲ್ಲಿಯೇ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
2010 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಅಶ್ವಿನ್ ಹಲವು ಮ್ಯಾಚ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗೇಮ್ ವಿನ್ನರ್ ಆಗಿದ್ದಾರೆ. ಮುಂದಿನ ಐಪಿಎಲ್ ನಲ್ಲಿ ಅಶ್ವಿನ್ ಮುಂದುವರಿಯುವ ಸಾಧ್ಯತೆ ಇದೆ.
ಟೆಸ್ಟ್ ನಲ್ಲಿ ಅಶ್ವಿನ್ ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, ತಮ್ಮ ಟೆಸ್ಟ್ ಕೆರಿಯರ್‌ನಲ್ಲಿ 537 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ ಬಳಿಕ ಭಾರತದ ಪರ ಅತ್ಯಧಿಕ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.ಇನ್ನು ಓಡಿಐ ನಲ್ಲಿ ಅಶ್ವಿನ್ 156 ವಿಕೆಟ್ ಗಳಿಸಿದ್ದಾರೆ.14 ವರ್ಷಗಳ ಕ್ರಿಕೆಟ್ ಪಯಣ ಮುಗಿಸಿದ ಕೇರಂ ಬಾಲ್ ಸ್ಪೆಷಲಿಸ್ಟ್ ಅಭಿಮಾನಿಗಳಿಗೂ ಧನ್ಯವಾದ ಅರ್ಪಿಸಿದ್ದು, ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಲ್ಲಿ ಮಿಂಚಿದ್ದ ದಿಗ್ಗಜ ಸ್ಪಿನ್ನರ್ ಎಂಬ ಖ್ಯಾತಿ ಪಡೆದಿದ್ದಾರೆ.