ಮೂಡ ಹಗರಣದಲ್ಲಿ (MUDA scam) ಸಿಎಂ ಸಿದ್ದರಾಮಯ್ಯ (Cm siddaramiah) ಪಾತ್ರವಿದೆ ಎಂದು ಆರೋಪಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ (Bjp & jds) ನಾಯಕರು ಹೋರಾಟಕ್ಕೆ ಮುಂದಾಗಿರುವ ಹಿನ್ನಲೆ, ಈ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಗಳ ಸಮೇತ ತಿರುಗೇಟು ನೀಡಿದ್ದಾರೆ. ಎರಡನೇ ಬಾರಿ ಮುಖ್ಯಮಂತ್ರಿಯಾಗಿರೋದನ್ನ ಸಹಿಸದೇ ವಿಪಕ್ಷಗಳು ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಸದನದಲ್ಲಿ ಮೂಡ ಹಗರಣದ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡದ ಹಿನ್ನಲೆ, ಅಹೋರಾತ್ರಿ ಪ್ರತಿಭಟನೆ ಮಾಡಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಬೆಂಗಳೂರಿನಿಂದ ಮೈಸೂರಿನ (Bangalore – mysuru) ವರೆಗೆ ಪಾದಯಾತ್ರೆ ಮಾಡಲು ಪ್ಲಾನ್ ರೂಪಿಸಿದ್ದಾರೆ. ಹೀಗಾಗಿ ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದು, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ಕೇವಲ ರಾಜಕೀಯ ಪ್ರೇರಿತ ಎಂದು ಜರಿದಿದ್ದಾರೆ.

1998 ರಿಂದ 2021 ರ ವರೆಗಿನ ಈ ಭೂಸ್ವಾಧಿನ ಮತ್ತು ಮರು ಹಂಚಿಕೆಯ ಎಲ್ಲಾ ದಾಖಲೆಗಳನ್ನ ಮುಂದಿಟ್ಟ ಸಿದ್ದರಾಮಯ್ಯ, ಇಂತದ್ದೇ ಜಾಗದಲ್ಲಿ ನಮಗೆ ಬದಲಿ ನಿವೇಶನ ನೀಡಿ ಎಂದು ನಾವು ಕೇಳಿಲ್ಲ. ಮೂಡ ಕೊಟ್ಟಿರು ಸ್ಥಳದಲ್ಲಿ ನಾವು ಸೈಟ್ ಪಡೆದುಕೊಂಡಿದ್ದೇ ಎಂದರು. ತಮ್ಮ ರಾಜಕೀಯ ಜೀವನ ತೆರೆದ ಪುಸ್ತಕದಂತಿದ್ದು, ವಿನಾಃಕಾರಣ ತಮ್ಮ ಹೆಸರಿಗೆ ಮಸಿ ಬಳಿಯು ಪ್ರಯತ್ನ ವಿಪಕ್ಷಗಳಿಂದ ನಡೆಯುತ್ತಿದೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ಇತ್ತ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೃಹತ್ ಪಾದಯಾತ್ರೆಗೆ ಸಜ್ಜಾಗಿದ್ದು, ಸದನ ಮುಗಿದ ನಂತರ, ಕೇಂದ್ರ ಸಚಿವ ಕುಮಾರಸ್ವಾಮಿ (HD kumaraswamy) ರಾಜ್ಯಕ್ಕೆ ಮರಳಿದ ನಂತರ ಪಾದಯಾತ್ರೆಗೆ ಚಾಲನೆ ನೀಡುವ ಯೋಚನೆಯಲ್ಲಿದ್ದಾರೆ. ಮೂಡ ಹಗರಣದ ಹಗ್ಗ-ಜಗ್ಗಾಟ ಮುಂದೆ ಯಾವ ಹಂತ ತಲುಪಲಿದೆ ಎಂಬುದನ್ನ ಕಾದುನೋಡಬೇಕಿದೆ.





