ಇಡೀ ವಿಶ್ವವನ್ನು ಆತಂಕಕ್ಕೆ ದೂಡಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ (Iran – Israel war) ಸದ್ಯ ಭಾರತದ ರಾಜಕಾರಣದಲ್ಲೂ (India politics) ದೊಡ್ಡ ಜಟಾಪಟಿ ಸೃಷ್ಟಿಸ್ತಿದೆ. ಈ ಯುದ್ಧದ ಬಗ್ಗೆ ಕೇಂದ್ರ ಸರ್ಕಾರದ ಮೌನವನ್ನ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia gandhi) ಪ್ರಶ್ನಿಸಿದ್ದಾರೆ.

ಈ ವೇಳೆ ಇರಾನ್ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿರುವ ಸೋನಿಯಾ ಗಾಂಧಿ, ಇಸ್ರೇಲ್ ನಡೆಸುತ್ತಿರುವ ದಾಳಿಯ ಬಗ್ಗೆ ಭಾರತ ಸರ್ಕಾರ ಕಾಯ್ದುಕೊಂಡಿರುವ ಮೌನ ಭಾರತದ ನೈತಿಕ, ರಾಜತಾಂತ್ರಿಕ ಸಂಪ್ರದಾಯಗಳಿಗೆ ವಿರುದ್ಧವಾದದ್ದು ಎಂದು ಟೀಕಿಸಿದ್ದಾರೆ.

ಇಸ್ರೇಲ್ ಮತ್ತು ಪ್ಯಾಲಸ್ಟೀನ್ ಎಂಬ 2 ದೇಶಗಳು ಅಸ್ತಿತ್ವ ಹೊಂದಿರಬೇಕು ಎಂಬುದು ಭಾರತದ ದೀರ್ಘಕಾಲದ ನೀತಿ.ಈಗ ಭಾರತ ಸರ್ಕಾರ ಇದನ್ನ ಕೈ ಬಿಟ್ಟಿದೆ ಅಂತ ಕಿಡಿಕಾರಿದ್ದಾರೆ.ಭಾರತದ ಮೌನ ಧ್ವನಿಯನ್ನು ಕಳೆದುಕೊಂಡಿದ್ದನ್ನು ಮಾತ್ರ ಪ್ರತಿನಿಧಿಸಲ್ಲ, ಮೌಲ್ಯಗಳ ಶರಣಾಗತಿಯನ್ನು ಪ್ರತಿನಿಧಿಸುತ್ತದೆ ಅಂತ ಸೋನಿಯಾ ವಾಗ್ದಾಳಿ ನಡೆಸಿದ್ದಾರೆ.











