ಭಾರತದ (India) ಮುಕುಟ ಗಡಿನಾಡು ಕಾಶ್ಮೀರದಲ್ಲಿ (kashmir) ನಮ್ಮ ಹೆಮ್ಮೆಯ ಸೈನಿಕರ ಕನ್ನಡ ಅಭಿಮಾನ ಕಂಡು ನೆಟ್ಟಿಗರು ಅದ್ರಲ್ಲೂ ಕನ್ನಡಿಗರು (kannadigas) ಫುಲ್ ಖುಷ್ ಆಗಿದ್ದಾರೆ. ಕರ್ನಾಟಕ ಮೂಲದ ಸೈನಿಕರು ಕಾಶ್ಮೀರದಲ್ಲಿ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಅಣ್ಣವ್ರ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಇದೀಗ ಈ ವಿಡಿಯೋ ಫುಲ್ ವೈರಲ್ (Viral video) ಆಗ್ತಿದ್ದು, ಗಡಿನಾಡಲ್ಲಿ ಕನ್ನಡ ಪ್ರೇಮದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ಇದೇ ವೇಳೆ ಕೆಲ ಕಿಡಿಗೇಡಿಗಳು ಸೈನಿಕರು ಈ ರೀತಿ ಕನ್ನಡ ಹಾಡಿಗೆ ಸ್ಟೆಪ್ಸ್ ಹಾಕಿರೋದರ ಬಗ್ಗೆ ಅಪಸ್ವರ ಎತ್ತಿದ್ದಾರೆ.
ನಮ್ಮ ರಾಷ್ಟ್ರ ಭಾಷೆ ಹಿಂದಿ (Hindi), ಹೀಗಾಗಿ ಹಿಂದಿ ಅದ್ರೆ ಓಕೆ. ಆದ್ರೆ ಕನ್ನಡ (kannada) ಯಾಕೆ ಅಂತಾ ಕೆಲವು ಮಂದಿ ಪ್ರಶ್ನೆ ಮಾಡೋ ಮೂಲಕ ಉದ್ದಟತನ ತೋರಿಸಿದ್ದಾರೆ. ಈ ಕಮೆಂಟ್‌ಗಳಿಗೂ ಕೂಡ ಕನ್ನಡಿಗರು ಛೀಮಾರಿ ಹಾಕಿದ್ದಾರೆ.