ತನ್ನ 15 ವರ್ಷ ವಯಸ್ಸಿನ ಮಗಳ ಅಶ್ಲೀಲ ವೀಡಿಯೋವನ್ನು ಪ್ರಸಾರ ಮಾಡಿದ್ದನ್ನು ವಿರೋಧಿಸಿದ ಗಡಿ ಭದ್ರತಾ ಪಡೆ ಸಿಬ್ಬಂದಿಯನ್ನು ಗುಜರಾತ್ನ ನಾಡಿಯಾಡ್ನಲ್ಲಿ ಥಳಿಸಿ ಕೊಂದ ಆತಂಕಕಾರಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಶನಿವಾರ ಚಕ್ಲಾಸಿ ಗ್ರಾಮದಲ್ಲಿ ವಿಡಿಯೋವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ 15 ವರ್ಷದ ಬಾಲಕನ ಮನೆಗೆ ಪ್ರಶ್ನಿಸುವ ಸಲುವಾಗಿ ಬಿಎಸ್ಎಫ್ ಯೋಧ ತಮ್ಮ ಕುಟುಂಬಸ್ಥರೊಂದಿಗೆ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ಅಲ್ಲಿ ಮನೆಯವರು ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ.
ಸೈನಿಕನ ಪುತ್ರಿ ಹಾಗೂ ಆರೋಪಿ ಬಾಲಕ ಸ್ನೇಹಿತರಾಗಿದ್ದರು ಎಂದು ತಿಳಿದು ಬಂದಿದೆ.
ಆರೋಪಿ ಬಾಲಕನು ಬಾಲಕಿಯ ಅಶ್ಲೀಲ ವಿಡಿಯೋವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ನಂತರ ಬಿಎಸ್ಎಫ್ ಜವಾನ ತನ್ನ ಕುಟುಂಬದೊಂದಿಗೆ ಬಾಲಕನ ಕುಟುಂಬದೊಂದಿಗೆ ಮಾತನಾಡಲು ಹೋಗಿದ್ದ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮೂಲಗಳು ಖಚಿತಪಡಿಸಿವೆ.
ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಶನಿವಾರ ರಾತ್ರಿ ಸೈನಿಕ ತನ್ನ ಪತ್ನಿ, ಇಬ್ಬರು ಪುತ್ರರು ಮತ್ತು ಸೋದರಳಿಯನೊಂದಿಗೆ ಯುವಕನ ಮನೆಗೆ ಹೋಗಿದ್ದರು. ಆದರೆ ಅವರ ಕುಟುಂಬದ ಸದಸ್ಯರು ಅವರನ್ನು ನಿಂದಿಸಲು ಪ್ರಾರಂಭಿಸಿದರು. ಅವರು ಅದನ್ನು ವಿರೋಧಿಸಿದಾಗ, ಗುಂಪು ಅವರ ಕುಟುಂಬದ ಮೇಲೆ ಹಲ್ಲೆ ನಡೆಸಿತು ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.