ತುಮಕೂರಲ್ಲಿ ಭಿನ್ನಮತ ಶಮನಕ್ಕೆ ವಿ.ಸೋಮಣ್ಣ ಹಗಲು ರಾತ್ರಿ ಕಸರತ್ತು ಮಾಡುತ್ತಿದ್ದಾರೆ. ಮಾಜಿ ಸಚಿವ ಸೊಗಡು ಶಿವಣ್ಣ ಮನೆಗೆ ಭೇಟಿ ನೀಡಿದ್ದ ಸೋಮಣ್ಣ, ಮನವೊಲಿಕೆ ಕಸರತ್ತು ಮಾಡಿದ್ದಾರೆ. ತುಮಕೂರು ಬಿಜೆಪಿ ಅಭ್ಯರ್ಥಿಯಾಗಿರೋ ವಿ.ಸೋಮಣ್ಣ, ಮಾಧುಸ್ವಾಮಿ ಬಣದಲ್ಲಿ ಗುರುತಿಸಿಕೊಂಡಿರುವ ಸೊಗಡು ಶಿವಣ್ಣ ಜೊತೆಗೆ ಚರ್ಚಿಸಿದ್ದಾರೆ. ಸಂಸದ ಜಿ.ಎಸ್ ಬಸವರಾಜು ಬದ್ಧವೈರಿಯಾಗಿರೋ ಸೊಗಡು ಶಿವಣ್ಣ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೊಗಡು ಶಿವಣ್ಣ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಚಿಕ್ಕಪೇಟೆಯ ಸೊಗಡು ಶಿವಣ್ಣ ಮನೆಗೆ ಭೇಟಿ ನೀಡಿ ಮನವೊಲಿಕೆ ಯತ್ನ ಮಾಡಿದ್ದಾರೆ. ತಮ್ಮ ಪರ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ ವಿ.ಸೋಮಣ್ಣ.
ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಸೊಗಡು ಶಿವಣ್ಣ ಮನೆಗೆ ಭೇಟಿ ವೇಳೆ ಮಾತುಕತೆ ಮಾಡಿದ್ದೇವೆ. ಕೆಲವಾರು ಕಾರಣದಿಂದ ನಾನು ಕೂಡ ಕೆಲವು ತಪ್ಪುಗಳನ್ನು ಮಾಡಿ ಒದ್ದಾಡುತ್ತಿರುತ್ತೇವೆ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ನೋವಾದ್ರೆ ಸಹಿಸಲ್ಲ ಅನ್ನೋ ಸಂದೇಶ ಕೊಟ್ಟಿದ್ದಾರೆ. ಈ ಕುಟುಂಬಕ್ಕೂ ನಮಗೂ ಅವಿನಾಭಾವ ಸಂಬಂಧ. ಹತ್ತಾರು ಕಾರ್ಯಕ್ರಮಗಳನ್ನ ನಾನು ಸೊಗಡು ಶಿವಣ್ಣ ಒಟ್ಟಾಗಿ ಮಾಡಿದ್ದೇವೆ. ಸ್ವಲ್ಪ ಯಡವಟ್ಟಾದ್ರೆ, ಸಣ್ಣದು ಕೂಡ ದೊಡ್ಡ ಅಸ್ತ್ರ ಆಗುತ್ತೆ ಅನ್ನೋದಕ್ಕೆ ಕೆಲವಾರು ಉದಾಹರಣೆಗಳನ್ನು ನೋಡಿದ್ದೇವೆ. ನಾವು ಸ್ವಲ್ಪ ಎಚ್ಚೆತ್ತುಕೊಂಡ್ವಿ, ಶಿವಣ್ಣನವರು ಸ್ವಾಭಿಮಾನ ಬೆಳಸಿಕೊಂಡಿದ್ದಾರೆ. ಮಾನಸಿಕ ತೋಳಲಾಟ ತಾಳಲಾರದೆ ಚುನಾವಣೆಗೆ ನಿಂತರು. ನನ್ನ ಸಂಪರ್ಕದಲ್ಲಿ ಇರುವ ರಾಷ್ಟ್ರೀಯ ನಾಯಕರಿಗೆ ಎಲ್ಲವನ್ನು ಹೇಳಿದ್ದೇನೆ. ಅವರ ಸ್ನೇಹಿತರ ಜೊತೆಗೆ ಸೇರಿ ಶಿವಣ್ಣನವರು ನಿರ್ಧಾರ ತೆಗೆದುಕೊಂಡಿದ್ದಾರೆ.
ವೈಯಕ್ತಿಕವಾಗಿ ಹಾಗೂ ಸಾಯೋತನಕ ಅವರ ಜೊತೆಗೆ ನಾನೂ ಇರುತ್ತೇನೆ. ರಾಜಕಾರಣ ಮುಳ್ಳಿನ ಹಾಸಿಗೆ, ಯಾರು ಶತ್ರುಗಳಲ್ಲ, ಮಿತ್ರರಲ್ಲ, ರಾಜಕೀಯ ನಿಂತ ನೀರಲ್ಲ. ಒಬ್ಬರ ಮನಸು ಮತ್ತೊಬ್ಬರ ಮನಸು ಒಂದಾಗಬೇಕು ಎಂದಿದ್ದಾರೆ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ.