ಸಿಲಿಕಾನ್ ಸಿಟಿಯಲ್ಲಿ ಚಿನ್ನಾಭರಣ ಕದಿಯುತ್ತಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಲೀಂ ಅಲಿಯಾಸ್ ಸಾಹಿಲ್ ಬಂಧಿತ ಆರೋಪಿ. ಅಷ್ಟಕ್ಕೂ ಪೊಲೀಸರು ಬಂಧಿಸಿರುವ ಆ ಐಷಾರಾಮಿ ಕಳ್ಳ ಯಾರ್ ಗೊತ್ತಾ..?

ಮುಂಬೈ ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್. ತಾನೊಬ್ಬ ಹೀರೋ ಅಂತ ಹೇಳ್ಕೊಂಡು ಬಿಲ್ಡಪ್ ಕೊಡ್ತಿದ್ದ ಈತ, ಮಾಡ್ತಿದ್ದಿದ್ದು ಮಾತ್ರ ಕಳ್ಳತನದ ಕೆಲಸ. ಒಂದು ವರ್ಷದ ಹಿಂದೆಯೂ ಬಸವನಗುಡಿ ಪೊಲೀಸರಿಂದ ಅರೆಸ್ಟ್ ಆಗಿದ್ದ ಸಾಹಿಲ್, ಜೈಲಿನಿಂದ ಹೊರ ಬಂದು ಮತ್ತೆ ಹಳೇ ಚಾಳಿ ಮುಂದುವರೆಸಿದ್ದ.

ಇದೀಗ ಮತ್ತೆ ಅಮೃತಹಳ್ಳಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ಬಂಧಿತನಿಂದ 3.5 ಕೆ.ಜಿಗೂ ಅಧಿಕ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ಧಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












