ಬೆಂಗಳೂರು: ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ ಹಾಗೂ ಸೋಪುಗಳ (Shampoo And Soap) ಮಾರಾಟ ನಿಷೇಧಿಸಿ ಅರಣ್ಯ ಮತ್ತು ಪರಿಸರ ಇಲಾಖೆ (Forest and Environment Department) ಆದೇಶ ಹೊರಡಿಸಿದೆ.

ನದಿ ತೀರದಲ್ಲಿ ಸೋಪು, ಶಾಂಪೂ ಬಳಕೆ ಹೆಚ್ಚಾಗಿದ್ದು, ಸ್ನಾನ ಮಾಡಿದ ನಂತರ ಭಕ್ತಾದಿಗಳು ಅರ್ಧಂಬರ್ಧ ಖಾಲಿಯಾದ ಸೋಪುಗಳನ್ನು ಕವರ್‌ಗಳಲ್ಲಿ ಹಾಕಿ ನದಿಯಲ್ಲೇ ಬಿಡುತ್ತಿದ್ದರು. ಇದರಿಂದ ನದಿ ನೀರಿನಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಈ ಕ್ರಮ ಕೈಗೊಂಡಿದೆ.

ನದಿ ದಡಗಳಲ್ಲಿ (River Bank) ಸೋಪು ಹಾಗೂ ಶಾಂಪೂ ಮಾರಾಟ ಮಾಡದಂತೆ ನಿಷೇಧ ಹೇರಲಾಗಿದೆ. ಭಕ್ತರು ತಮ್ಮ ವಸ್ತುಗಳನ್ನು ನದಿಗಳಲ್ಲಿ ವಿಸರ್ಜಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ಆದೇಶ ಹೊರಡಿಸಿದ್ದಾರೆ.