ರಾತ್ರಿ ಮಲಗಿದ ಕೆಲ ನಿಮಿಷಗಳಲ್ಲಿ ಹೆಚ್ಚು ಜನಕ್ಕೆ ಗೊರಕೆ ಹೊಡೆಯುವ ಅಭ್ಯಾಸವಿರುತ್ತದೆ. ಅವರೇನೋ ನಿದ್ದೆಯಲ್ಲಿ ಗೊರಕೆಯನ್ನು ಹೊಡಿತಾರೆ ಆದರೆ ಅವರ ಅಕ್ಕಪಕ್ಕ ಮಲಗಿದವರಿಗೆ ಗೊರಕೆಯಿಂದ ಡಿಸ್ಟರ್ಬ್ ಆಗುತ್ತದೇ..ನಿದ್ದೆ ಸರಿಯಾಗಿ ಆಗುವುದಿಲ್ಲ ಕಿರಿಕುರಿ ಉಂಟಾಗುತ್ತದೆ.ಎಷ್ಟೋ ಬಾರಿ ಇದೇ ವಿಚಾರವಾಗಿ ಗಂಡ ಹೆಂಡತಿಯ ನಡುವೆ ಕಲಹಗಳು ಉಂಟಾಗಿ ಡಿವೋರ್ಸ್ ಆಗಿರುವ ಉದಾಹರಣೆಗಳಿವೆ.
![](https://pratidhvani.com/wp-content/uploads/2024/06/IMG_8162-1.jpeg)
ಈ ಗೊರಕೆಯನ್ನು ಹೊಡೆಯುವುದು ಯಾಕೆಂದರೆ ಆಯಾಸ ಹೆಚ್ಚಾದಾಗ, ಹೆಚ್ಚು ಕೆಲಸ ಮಾಡಿದಾಗ ಉಸಿರುಗಟ್ಟಿದಾಗ ,ಬಾಯಿ ,ಗಂಟಲು ಅಥವಾ ಉಸಿರಿನ ಸಮಸ್ಯೆ ಇದ್ದಾಗ ಈ ಗೊರಕೆ ಹೊಡೆಯುವುತ್ತಾರೆ. ಇನ್ನು ಈ ಗೊರಕೆ ಹೊಡೆಯುವುದನ್ನು ಹೇಗಪ್ಪ ನಿವಾರಣೆ ಮಾಡಿಕೊಳ್ಳುವುದು ಎಂಬ ಯೋಚನೆ ಇದ್ದರೆ ಸರಳ ಹ್ಯಾಕ್ ಟ್ರೈ ಮಾಡಿ.
![](https://pratidhvani.com/wp-content/uploads/2024/06/IMG_8160-1.jpeg)
- ಗೊರಕೆ ಹೊಡೆಯುವುದನ್ನು ತಪ್ಪಿಸಲು ನೀವು ಮಲಗುವ ಪೊಸಿಷನನ್ನ ಚೇಂಜ್ ಮಾಡಿ ಸೈಡ್ ಆಂಗಲ್ ಅಲ್ಲಿ ಮಲಗುವುದರಿಂದ ಗೊರಕೆಯನ್ನು ಅವಾಯ್ಡ್ ಮಾಡಬಹುದು.
- ಮದ್ಯಪಾನವನ್ನು ಸೇವನೆ ಮಾಡುವವರಿಗೆ ಗೊರಕೆ ಹೊಡೆಯುವ ಅಭ್ಯಾಸ ಹೆಚ್ಚಿರುತ್ತದೆ. ಹಾಗಾಗಿ ಮಧ್ಯಪಾನವನ್ನು ಕುಡಿಯುವುದನ್ನ ತಕ್ಕಮಟ್ಟಿಗೆ ಕಡಿಮೆ ಮಾಡಿಕೊಂಡರೆ ಈ ಗೊರಕೆಯಿಂದ ದೂರವಿರಬಹುದು.
- ಕೆಲವೊಬ್ಬರಿಗೆ ಮೂಗು ಬ್ಲಾಕ್ ಆದಾಗ ಗೊರಕೆ ಹೊಡೆಯುವುದು ಹೆಚ್ಚಾಗುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ನಿಮ್ಮ ನೋಸ್ ಬ್ಲಾಕ್ ಆಗದೆ ಇರುವ ರಿತಿಕ್ ನೋಡಿಕೊಳ್ಳಿ .ಇದರಿಂದ ಗೋರಿಕೆಯನ್ನು ತಪ್ಪಿಸಬಹುದು.
- ಒಂದು ಲೋಟ ಉಗುರು ಬೆಚ್ಚನೆ ನೀರಿಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಗೊರಕೆಯ ಸಮಸ್ಯೆ ದೂರವಾಗುತ್ತದೆ. ಆದರೆ ಏಲಕ್ಕಿಯನ್ನು ಹೆಚ್ಚು ಬಳಸುವುದರಿಂದ ನಮ್ಮ ದೇಹದ ಉಷ್ಣತೆ ಜಾಸ್ತಿ ಆಗುತ್ತದೇ.
- ಒಂದು ಟೇಬಲ್ ಸ್ಪೂನ್ ಅಷ್ಟು ಆಲಿವ್ ಎಣ್ಣೆಗೆ ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪವನ್ನು ಬೆರೆಸಿ ರಾತ್ರಿ ಮಲಗುವ ಮುಂಚೆ ಸೇವಿಸುವುದರಿಂದ ಗೊರಕೆ ಹೊಡೆಯುವುದನ್ನು ತಪ್ಪಿಸಬಹುದು.
- ರಾತ್ರಿ ಮಲಗುವ ಮುನ್ನ ಟೀ ಅಥವಾ ಕಾಫಿಯನ್ನ ಸೇವಿಸಿದರೆ ಗೊರಕೆ ಸಮಸ್ಯೆಯಿಂದ ದೂರ ಬಹುದು ಆದರೆ ಕೆಲವರಿಗೆ ಟೀ ಅಥವಾ ಕಾಫಿ ಕುಡಿದರೆ ನಿದ್ದೆ ಬರೋದಿಲ್ಲ.
- ಗೊರಕೆ ಹೊಡೆಯುವುದನ್ನು ಕಡಿಮೆ ಮಾಡಲು ಸೋಯಾ ಹಾಲನ್ನ ಕುಡಿಯುವುದು ತುಂಬಾನೇ ಒಳ್ಳೆಯದು ಇದರಿಂದ ಗೊರಿಕೆಯನ್ನು ತಪ್ಪಿಸಬಹುದು.