ಮುಡಾ ಪ್ರಕರಣದ (Muda case) ದೂರುದಾರ, ಸಾಮಾಜಿಕ ಹೋರಾಟಗಾರ ಸ್ನೇಹಮಯಿಕೃಷ್ಣ (Snehanayi krishna) ಮತ್ತು ಗಂಗರಾಜು (GANG’a raju) ಅವರ ಪೋಟೋಗೆ ರಕ್ತದ ಅಭಿಷೇಕ ಮಾಡಿದ ಪ್ರಕರಣಕ್ಕೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ರೀತಿ ಬಲಿ ಕೊಟ್ಟು ಪ್ರಾಣಿಯ ರಕ್ತದಿಂದ ಅಭಿಷೇಕ ಮಾಡಿರುವುದು, ಶಕ್ತಿ ತುಂಬಲು ಅಲ್ಲ..ಬದಲಾಗಿ ನಮ್ಮನ್ನು ವಶೀಕರಣ ಮಾಡಲು ಎಂದು ಸ್ನೇಹಮಯಿಕೃಷ್ಣ ಗಂಭೀರ ಆರೋಪ ಮಾಡಿದ್ದು ಈ ಬಗ್ಗೆ ದೂರು ದಾಖಳಿಸಿದ್ದಾರೆ.

ಈ ವಿಚಾರವಾಗಿ ಮಂಗಳೂರು ಪೊಲೀಸ್ ಕಮಿಷನರ್ಗೆ (Mangalore police commissioner) ಸ್ನೇಹಮಯಿಕೃಷ್ಣ ಲಿಖಿತ ದೂರು ಸಲ್ಲಿಸಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆಳೆದು ತಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.

ನನ್ನ ಅನುಭವ ಮತ್ತು ಲಭ್ಯ ಇರುವ ಮಾಹಿತಿ ಪ್ರಕಾರ ನಮಗೆ ಬಲ ತುಂಬುವ ಸಲುವಾಗಿ ಈ ಕೃತ್ಯ ನಡೆಸಿರುವುದಿಲ್ಲ, ನಮ್ಮನ್ನು ವಶೀಕರಣ ಮಾಡಿಕೊಂಡು, ಆಮೀಷಕ್ಕೆ ಒಳಪಡಿಸಿ ಸಿದ್ದರಾಮಯ್ಯನವರ ಹೆಂಡತಿ ಶ್ರೀಮತಿ ಪಾರ್ವತಿರವರಿಗೆ ಅನುಕೂಲವಾಗುವಂತೆ ಮಾಡುವ ನಿಟ್ಟಿನಲ್ಲಿ ನಾವುಗಳು ನಡೆದುಕೊಳ್ಳಬೇಕು ಎಂಬ ದುರುದ್ದೇಶದಿಂದ ಈ ಕೃತ್ಯವನ್ನು ನಡೆಸಲಾಗಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.











