ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣರ ಗ್ರಹಗತಿಯೇ ಸರಿ ಇಲ್ಲ. ಏಟಿನ ಮೇಲೆ ಏಟು ಪೆಟ್ಟಿನ ಮೇಲೆ ಪೆಟ್ಟು, ಮಾನಸಿಕ ಘಾಸಿ ಮತ್ತು ದೈಹಿಕವಾಗಿಯೂ ಗಾಯ. ನಿನ್ನೆ ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದ ಅವರು ರಾತ್ರಿ ತಮ್ಮೂರು ಹೊಳೆನರಸೀಪುರಕ್ಕೆ ತೆರಳಿದ್ದರು. ಏಕಾದಶಿ ಪ್ರಯುಕ್ತ ಉಪವಾಸ ಆಚರಿಸುತ್ತಿದ್ದ ರೇವಣ್ಣ ಬೆಳಗ್ಗೆ ಎದ್ದು ಹರದನಹಳ್ಳಿಯ ದೇವೇಶ್ವರ ಗುಡಿ ಪೂಜೆ ಸಲ್ಲಿಸಲು ಹೋಗಿದ್ದು. ಪೂಜೆ ಮುಗಿಸಿಕೊಂಡು ತೆರಳುವಾಗ ಕಾಲು ಜಾರಿ ಬಿದ್ದಿದ್ದರಿಂದ ಅವರ ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಹೊಳೆನರಸೀಪುರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಕಳೆದ ಎರಡು ಮೂರು ತಿಂಗಳುಗಳಿಂದ ರೇವಣ್ಣ ಕುಟುಂಬಕ್ಕೆ ಆಪತ್ತುಗಳ ಸರಮಾಲೆ ಎದುರಾಗಿದೆ. ರೇವಣ್ಣ ಕೆಲಕಾಲ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದು, ಬೆಂಗಳೂರಿನ ಮನೆಗೆ ವಿಶ್ರಾಂತಿ ಪಡೆಯುವುದಾಗಿ ಹೇಳಿ ತೆರಳಿದರು. ಆಷಾಡ ಏಕಾದಶಿಯ ಪ್ರಯುಕ್ತ ಹರದನಹಳ್ಳಿಯಿಂದ ಬಂದಿದ್ದ ಅವರು ಮೊದಲಿಗೆ ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲೂ ಪೂಜೆ ಸಲ್ಲಿಸಿದ್ದರು.
ಮುಡಾ.. ವಕ್ಫ್.. ಈಗ BPL ಕಾರ್ಡ್.. ಯೂ ಟರ್ನ್ ಸರ್ಕಾರ.. ಬಿಜೆಪಿ ವ್ಯಂಗ್ಯ..
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಬಗ್ಗೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಒಂದು ವೇಳೆ ಅರ್ಹರಿದ್ದು, ಎಪಿಎಲ್ ಆಗಿ...
Read moreDetails