ರಾತ್ರಿ ಇಡೀ ಸಿಐಡಿ ಕಚೇರಿಯಲ್ಲೇ (CID office) ಕಾಲ ಕಳೆದ ರೇವಣ್ಣ (Revanna) ಸರಿಯಾಗಿ ನಿದ್ರೆ ಮಾಡದೇ ತೊಳಲಾಟ ನಡೆಸಿದ್ದಾರೆ ಎನ್ನಲಾಗ್ತಿದೆ. ರಾತ್ರಿ ಇಡೀ ಒತ್ತಡದಲ್ಲೇ ಕಾಲ ಕಳೆದ ರೇವಣ್ಣ, ಚಿಂತೆಗೆ ಜಾರಿರುವಂತೆ ಕಾಣಿಸ್ತಿದೆ. ರೇವಣ್ಣಗಾಗಿ ಎಸ್.ಐ.ಟಿ (SIT) ಅಧಿಕಾರಿಗಳು ಹೊಸ ಹಾಸಿಗೆ ಮತ್ತು ಬೆಡ್ ಶೀಟ್ ಕೂಡ ತಂದಿದ್ದರು.
ಸಿಐಡಿ ಕಚೇರಿಗೆ ಬಂದಾಗಿನಿಂದಲೂ ಮಂಕಾಗಿರುವ ರೇವಣ್ಣ , ಮಗನ ಭವಿಷ್ಯ, ಕುಟುಂಬದ ಮರ್ಯಾದೆ, ಬಂಧನದ ಬಗ್ಗೆ ಚಿಂತೆ ಮಾಡ್ತಿದ್ದಾರೆ.ಅದಲ್ಲದೇ, ಮಾಜಿ ಪ್ರಧಾನಿಗಳ ಪುತ್ರನಿಗೆ ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆಯೂ ಟೆನ್ಶನ್ (Tension) ಹೆಚ್ಚಾದಂತೆ ಕಾಣ್ತಿದೆ.
ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ (Sexual harassment) ನಡೆಸಿರುವ ಆರೋಪ ಹೊತ್ತಿದ್ದ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣರನ್ನ (HD revanna) ಎಸ್ ಐ ಟಿ (SIT) ಅಧಿಕಾರಿಗಳು ಶನಿವಾರ ರಾತ್ರಿ ಬಂಧಸಿ ಎಸ್.ಐ.ಟಿ ಕಛೇರಿಗೆ ಕರೆತಂದಿದ್ರು. ಸಾಕಷ್ಟು ಹೈಡ್ರಾಮಗಳ (Highdrama) ನಂತರ ಕೊನೆಗೂ ಹೆಚ್ಚು ರೇವಣ್ಣರನ್ನ ಎಸ್ ಐ ಟಿ ತಂಡ ಅರೆಸ್ಟ್ ಮಾಡಿದೆ.