ನಿದ್ದೆ ಪ್ರತಿಯೊಬ್ಬರಲ್ಲು ಕೂಡಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಿಯಾಗಿ ನಿದ್ದೆ ಆಗಿಲ್ಲವೆಂದ್ರೆ ಮರುದಿನ ಆಕ್ಟೀವ್(Active) ಆಗಿರಲು ಸಾಧ್ಯವಿಲ್ಲಾ,ಒಂದು ರೀತಿಯ ಹಿಂಸೆ,ಸುಸ್ತು ಯಾವ ಕೆಲಸದ ಮೇಲೂ ಆಸಕ್ತಿ ಇರುವುದಿಲ್ಲಾ ಹೆಚ್ಚು ಕಾಡುವುದು ಮೂಡ್ ಸ್ವಿಂಗ್.ದೊಡ್ಡವರಿಗೆ ನಿದ್ದೆ ಸರಿಯಾಗಿ ಆಗದಿದ್ರೆ ಈ ಸಮಸ್ಯಗಳು ಎದುರಾಗುತ್ತದೆ.ಅದೆ ಮಕ್ಕಳಿಗೆ ನಿದ್ದೆ ಕೊರತೆ ಆದ್ರೆ ಅಬ್ಬಬ್ಬ ಅವ್ರಿಗೆ ಮಾತ್ರ ಕಿರಿಕಿರಿ ಅಲ್ಲದೆ ದೊಡ್ಡವರಿಗೆ ಮಕ್ಕಳಿಂದ ಹಿಂಸೆ. ಮಕ್ಕಳಿಗೆ ಹಲ್ತಿ ನಿದ್ದೆ ಇಲ್ಲದಿದ್ರೆ ಏನೇಲ್ಲ ಆರೋಗ್ಯ ಸಮಸ್ಯೆಗಳು(Health Problem) ಎದುರಾಗುತ್ತದೆ ಅನ್ನೊದರ ಮಾಹಿತಿ ಹೀಗಿದೆ.
ಮಕ್ಕಳು ನಿದ್ರಾವಂಚಿತರಾದ್ರೆ ಹಾರ್ಮೋನ್ ರೆಗ್ಯುಲೇಶನ್(Regulation) ತೊಂದರೆ ಉಂಟಗುತ್ತದೆ. ಇದು ಮಕ್ಕಳ ಬೆಳವಣಿಗೆಗೆ ಅಡ್ಡಿ ಮಾಡುತ್ತದೆ,ಜೊತೆಗೆ ಹಸಿವಾಗುವುದು ಕಡಿಮೆಯಾಗುತ್ತದೆ ಪ್ರತಿರಕ್ಷಣ ಕಾರ್ಯ ಕೂಡಾ ಸರಿಯಾಗುವುದಿಲ್ಲ. ನಿದ್ರೆಯ ಕೊರತೆಯಿಂದ ಮಕ್ಕಳು ಆಕ್ಟೀವ್ ಆಗಿರುವುದಿಲ್ಲಾ. ಕಲಿಯುವ ಆಸಕ್ತಿ ಇರುವುದಿಲ್ಲಾ, ನೆನಪಿನ ಶಕ್ತಿಯ ಮೇಲು ತೊಂದರೆಯುಂಟು ಮಾಡುತ್ತದೆ, ಯಾವುದ ಮೇಲು ಆಟೆನ್ಶನ್(Attention) ಹಾಗೂ ಕಾನ್ಸನ್ಟ್ರೇಶನ್(Concentration) ಇರುವುದಿಲಲ್ಲಾ.
ಇದ್ದಕ್ಕಿದ್ದ ಹಾಗೇ ಸುಸ್ತು ಹಾಗೂ ಹುಷಾರಿಲ್ಲದ ಹಾಗೆ ಆಗುತ್ತದೆ. ತಲೆ ನೋವು, ವಾಂತಿ, ಹೊಟ್ಟೆ ನೋವು(Stomach Pain) ಇಂತವು ತಕ್ಷಣಕ್ಕೆ ಶುರುವಾಗುತ್ತದೆ ಆದ್ರೆ, ಅತಿ ಹೆಚ್ಚು ನಿದ್ರೆ ಕೊರತೆಯಿಂದಾಗಿ ಒಂದು ಏಜ್ನಲ್ಲಿ ಹೃದಯಕ್ಕೆ ಸಂಭಂದಿಸಿದ ಕಾಯಿಲೆಗಳು ಹಾಗೂ ಡಯಾಬಿಟೀಸ್(Diabetes) ಬರುವಂತಹ ಚಾನ್ಸ್ ಹೆಚ್ಚಿರುತ್ತದೆ.
ಇದರ ಜೊತೆಗೆ ಮಕ್ಕಳಲ್ಲಿ ಕೋಪ, ಆತಂಕ ಹೆಚ್ಚಾಗುತ್ತದೆ, ಸುಮ್ನೆ ಅಳುವುದು ಕಿರಿಕಿರಿ ಮಾಡುವುದು,ರಗಳೆ ಹೆಚ್ಚಾಗುತ್ತದೆ. ಇನ್ನು ಅವ್ರ ಮೆಂಟಲ್ ಹೆಲ್ತ್ಗು(Mental Health) ಕೂಡಾ ತೊಂದರೆ ಇದರಿಂದ ಕೆಲವು ಮಕ್ಕಳು ಡಿಪ್ರೆಶನ್(Depression) ಗೆ ಹೋಗುತ್ತಾರೆ, ಅವ್ರೆ ಒವರ್ ಆಲ್ ಎಮೋಶನ್ಸ್ ಅವ್ರ ಕಂಟ್ರೋಲ್ ಅಲ್ಲಿ ಇರುವುದಿಲ್ಲಾ, ಹಾಗೂ ಕ್ವಾಲಿಟಿ(Kwality) ಲೈಫ್ನ ಲೀಡ್ ಮಾಡುವುದಕ್ಕೆ ಕಷ್ಟವಾಗುತ್ತದೆ.
ಒಟ್ಟಿನಲ್ಲಿ ಯಾವೂದೆ ಕಾರಣಕ್ಕು ಮಕ್ಕಳಲ್ಲಿ(Children) ನಿದ್ದೆಯ ಕೊರತೆ ಆಗದಂತೆ ಕಾಳಜಿ ವಹಿಸುವಂತದ್ದು ತಂದೆ ತಾಯಿಯ ಜವಬ್ದಾರಿ. ಮಕ್ಕಳ ಯೋಗ ಕ್ಷೇಮ ಆರೋಗ್ಯ ಇದೆಲ್ಲದರ ಜೊತೆಗೆ ನಿದ್ದೆ ಕೂಡಾ ಅತಿ ಮುಖ್ಯ.