ಹೆಚ್ಚು ಜನರ ದೇಹದ ಮೇಲೆ ಅದರಲ್ಲು ಕುತ್ತಿಗೆ ಹಾಗೂ ಮುಖದ ಮೇಲೆ ನರಹುಲಿಗಳನ್ನ ನಾವು ಸಾಮಾನ್ಯವಾಗಿ ನೋಡ್ತಿವಿ. ನರಹುಲಿಗಳು ಯಾಕೆ ಬರುತ್ತದೆ ಅಂದ್ರೆ ಪ್ಯಾಪಿಲೋಮ ವೈರಸ್ ನ ಕೆಲವು ಸ್ಟ್ರೈನ್ ನಿಂದ ಉಂಟಾಗುತ್ತದೆ..
ನರಹುಲಿಗಳಿಂದ ಯಾವುದೇ ರೀತಿಯ ನೋವು ಅಥವ ಕಿರಿಕಿರಿ ಇರುವುದಿಲ್ಲ..ಇದು ಒಂದು ಚಿಕ್ಕ ಮಾಂಸದ ಮುದ್ದೆ,ನೋಡೋದಕ್ಕೆ ಹುಣ್ಣಿನಂತೆ ಕಾಣಿಸುತ್ತದೆ..ಆದ್ರೆ ದಿನ ಕಳೆದಂತೆ ಒಂದಿರುವ ನರಹುಲಿ ಜಾಸ್ತಿ ಆಗ್ತಾ ಹೋಗುತ್ತದೆ..ಕೆಲವರು ಲೇಸರ್ ಟ್ರೀಟ್ಮೆಂಟ್ ಮಾಡಿಸ್ತಾರೆ..ಆದ್ರೆ ಸಾಕಷ್ಟು ಜನ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ..ಮನೆಯಲ್ಲಿ ಯಾವ್ದುದೇ ಖರ್ಚು ಇಲ್ಲದೆ ನರಹುಲಿನ ಹೇಗೆ ಕಡಿಮೆ ಮಾಡ್ಕೊಳ್ಬಹುದು ಅನ್ನೋದರ ಟಿಪ್ಸ್ ಇಲ್ಲಿದೆ..
ಅಲೋವೆರಾ
ಪ್ರತಿದಿನ ನಾವು ನರಹುಲಿ ಗಳು ಆದ ಜಾಗಕ್ಕೆ ಅಲೋವೆರವನ್ನು ಹಚ್ಚುವುದರಿಂದ ನರಹುಳಿಗಳು ಬೇಗನೆ ಕಡಿಮೆಯಾಗುತ್ತದೆ. ಇದರಿಂದ ಏನೆಲ್ಲಾ ಬೆನಿಫಿಟ್ಸ್ ಅಂದ್ರೆ ಆಂಟಿವೈರಸ್,ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿಬಯೋಟಿಕ್ ಪ್ರಾಪರ್ಟೀಸ್ ಇದರಲ್ಲಿ ಹೆಚ್ಚಿರುತ್ತದೆ. ನರಹುಲಿ ಗಳನ್ನ ಡ್ರೈ ಮಾಡೋದಿಕ್ಕೆ ಸಹಾಯ ಮಾಡುತ್ತೆ ಜೊತೆಗೆ ಯಾವ ಒಂದು ವೈರಸ್ ಇಂದ ನರಹುಲಿ ಗಳು ಬರ್ತಾ ಇದೆಯೋ ಅಂತಹ ವೈರಸ್ ನ ಇದು ಶಮನಗೊಳಿಸುತ್ತದೆ.
ಆಪಲ್ ಸೈಡರ್ ವಿನಿಗರ್
ಆಪಲ್ ಸೈಡರ್ ವಿನಿಗರ್ ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟೀಸ್ ಹೆಚ್ಚಿರುವುದರಿಂದ ಇದು HPV ವಿರುದ್ಧ ಹೋರಾಡುತ್ತದೆ. ಹಾಗೂ ಇದರಲ್ಲಿ ಸ್ಯಾಲಿಸಿಲಿಕ್ ಆಸಿಡ್ ಇರೋದ್ರಿಂದ ಇದು ಇನ್ಫೆಕ್ಟೆಡ್ ಸ್ಕಿನ್ ನ ಟ್ರೀಟ್ ಮಾಡುತ್ತದೆ. ಎರಡು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರನ್ ನ ಒಂದು ಕಪ್ ನಲ್ಲಿ ಹಾಕಿ ಅದಕ್ಕೆ ಒಂದು ಕಾಟನ್ ಬಟ್ಟೆಯನ್ನು ಅದ್ದಿ ಬ್ಯಾಂಡೇಜ್ ರೀತಿ ನರಹುಲಿ ಗಳಾದ ಜಾಗಕ್ಕೆ ಹಾಕಿ ಎರಡರಿಂದ ಮೂರು ಗಂಟೆ ಬಿಟ್ಟು ತೆಗೆಯುವುದರಿಂದ ಕಡಿಮೆಯಾಗುತ್ತದೆ.
ಆಲೂಗಡ್ಡೆ ರಸ
ನರಹುಲಿ ಗಳಾದ ಜಾಗಕ್ಕೆ ಆಲೂಗಡ್ಡೆ ರಸವನ್ನ ಹಚ್ಚುವುದರಿಂದ ಅದು ಡಿ ಹೈಡ್ರೇಟ್ ಆಗಿ ನರಹುಲಿ ಗಳನ್ನು ತೆಗೆದುಹಾಕುತ್ತದೆ. ಬಳಸುವ ರೀತಿ ಚಿಕ್ಕ ತುಂಡುಗಳಾಗಿ ಆಲೂಗೆಡ್ಡೆಯನ್ನು ಕಟ್ ಮಾಡಿ ನರಹುಲಿಗಳಾದ ಜಾಗಕ್ಕೆ ಅದನ್ನ ಚೆನ್ನಾಗಿ ಉಜ್ಜಬೇಕು ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಬೇಗನೆ ನರಹುಳಿಗಳು ಕಡಿಮೆಯಾಗುತ್ತದೆ.
ನರಹುಲಿಗಳಾದಾಗ ಭಯಪಟ್ಟು ಡಾಕ್ಟರ್ ಸಜೇಶನ್ ಇಲ್ಲದೆ ಯಾವುದೇ ರೀತಿಯ ಕ್ರೀಮ್ ಗಳನ್ನ ಬಳಸುವುದು ಅಪಾಯ. ನರಹುಳಿಗಳು ಹೆಚ್ಚಾದಾಗ ಈ ಮನೆಮದ್ದುಗಳನ್ನು ಟ್ರೈ ಮಾಡಿ..