ಈದ್ ಹಬ್ಬದ ಶುಭಾಶಯ ಕೋರಲು ನನ್ನ ತಂದೆ ನನ್ನನ್ನು ದೆಹಲಿಯ ಕಿಂಗ್ ಎಡ್ವರ್ಡ್ ರಸ್ತೆ ಮನೆಗೆ ಕರೆದೊಯ್ದಾಗ ನಾನು ಮೊದಲ ಬಾರಿಗೆ ಮೌಲಾನಾ ಅಬುಲ್ ಕಲಾಂ ಆಜಾದ್ ಅವರನ್ನು ಭೇಟಿಯಾಗಿದ್ದೆ, ನಾನಾಗ ಸಣ್ಣ ಹುಡುಗಿ. ನಾನು ಒಂದು ದಿನ ಅವರ ಜೀವನ ಚರಿತ್ರೆಕಾರಳಾಗುತ್ತೇನೆ ಮತ್ತು ನನ್ನ ಜೀವನದ ಅರ್ಧದಷ್ಟು ಜೀವನವನ್ನು ಅವರ ಜೀವನ ಮತ್ತು ಅವರ ಕೃತಿಗಳನ್ನು ಅಧ್ಯಯನ ಮಾಡುತ್ತೇನೆ ಎಂದು ನಾನು ಕಲ್ಪನೆ ಮಾಡಿಕೊಂಡಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಶಿಕ್ಷಣ ತಜ್ಞೆ, ಬರಹಗಾರ್ತಿ ಮತ್ತು ಭಾರತದ ಯೋಜನಾ ಆಯೋಗದ ಮಾಜಿ ಸದಸ್ಯೆಯಾಗಿರುವ ಸೈದಾ ಹಮೀದ್.
“ʼಒಂದು ವೇಳೆ, ಕುತುಬ್ ಮಿನಾರ್ ಮೂಲಕ ಸ್ವರ್ಗದಿಂದ ದೇವದೂತ ಇಳಿದು ಹಿಂದೂ ಮುಸ್ಲಿಂ ಐಕ್ಯತೆಗೆ ಬದಲಾಗಿ ಸ್ವರಾಜ್ಯ ನೀಡುವುದೆಂದರೆ ನಾನು ಅದನ್ನು ನಿರಾಕರಿಸುತ್ತೇನೆ. ಶೀಘ್ರವಾಗಿಯೋ, ತಡವಾಗಿಯೋ ನಾವು ಸ್ವರಾಜ್ಯವನ್ನು ಪಡೆದೇ ಪಡೆಯುತ್ತೇವೆ, ಸ್ವರಾಜ್ಯ ತಡವಾದಷ್ಟು ಭಾರತಕ್ಕೆ ನಷ್ಟ, ಆದರೆ ಒಮ್ಮೆ ಹಿಂದೂ-ಮುಸ್ಲಿಮರ ಐಕ್ಯತೆ ನಷ್ಟವಾದರೆ ಅದು ಮಾನವಕುಲಕ್ಕೆ ಆಗುವ ನಷ್ಟ. ನಮ್ಮ ಏಕತೆಯನ್ನು ಸ್ವಾತಂತ್ರ್ಯದ ಬೆಲೆಯಾಗಿ ತೆರುವುದು ಎಲ್ಲಾ ಮಾನವೀಯತೆಯನ್ನೂ ತ್ಯಜಿಸಿದಂತೆ” ಎಂದು ಆಜಾದ್ ಅವರು 1923ರಲ್ಲಿ ಅತಿ ಚಿಕ್ಕ ವಯಸ್ಸಿನ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾಗ ಭಾಷಣ ಮಾಡಿದ್ದರು.

ಹಿಂದೂ-ಮುಸ್ಲಿಂ ಐಕ್ಯತೆಯ ಆದರ್ಶವನ್ನು ಆಜಾದ್ ಅವರು ಮೊದಲಿನಿಂದಲೂ ಹೊಂದಿದ್ದರು. ತಂದೆ ಮೌಲಾನಾ ಖೈರುದ್ದೀನ್ ಅವರು ಪ್ರಖ್ಯಾತ ಸೂಫಿ ಸಂತರು ಅವರ ಕಟ್ಟುನಿಟ್ಟಿನಲ್ಲಿ ಆಜಾದರು ಜಾತ್ಯಾತೀತವಾಗಿ ಕೋಲ್ಕತ್ತಾದಲ್ಲಿ ಬೆಳೆದಿದ್ದರು. ಅವರ ಧ್ಯೇಯಕ್ಕಾಗಿನ ತುಡಿತ, ಹೋರಾಟ ಅಲ್ಲಿಂದಲೇ ಆರಂಭವಾಗಿತ್ತು ಎಂದು ಅಭಿಪ್ರಾಯ ಪಡುತ್ತಾರೆ ಸಯೀದಾ.
ಆದರೆ ಆಜಾದ್ ಅವರನ್ನು ಕೇವಲ ಮುಸ್ಲಿಂ ನಾಯಕ ಅಥವಾ ಮುಸ್ಲಿಮರ ನಾಯಕ ಎಂದು ಕರೆಯುವುದನ್ನು ಲೇಖಕಿ ಸಯೀದಾ ಒಪ್ಪುವುದಿಲ್ಲ. ಒಂದು ಸಮುದಾಯಕ್ಕಾಗಿ ಅಲ್ಲ , ಅವರು ಎಲ್ಲಾ ಭಾರತೀಯರಿಗಾಗಿ ಇದ್ದವರು ಎನ್ನುತ್ತಾರೆ.
1946 ರಲ್ಲಿ ಅವರು ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಅವರು ಮಾಡಿದ್ದ “ಒಬ್ಬ ಹಿಂದೂ ತಾನು ಭಾರತೀಯನೆಂದೂ, ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಬಲ್ಲಂತೆಯೇ ನಾವು ಭಾರತೀಯರು ಮತ್ತು ಇಸ್ಲಾಂ ಧರ್ಮವನ್ನು ಅನುಸರಿಸುತ್ತೇವೆ ಎಂದು ಸಮಾನ ಹೆಮ್ಮೆಯಿಂದ ಹೇಳಬಹುದು ಹಾಗೆಯೇ, ಒಬ್ಬ ಕ್ರಿಶ್ಚಿಯನ್ ತಾನು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಭಾರತೀಯ ಎಂದು ಸಮಾನ ಹೆಮ್ಮೆಯಿಂದ ಹೇಳಬಹುದು” ಎಂದು ಭಾಷಣ ಮಾಡಿದ್ದರು. ಅವರ ಭಾಷಣವು ಭಾರತದ ಬಹುತ್ವವವನ್ನು ಪ್ರತಿನಿಧಿಸುವಂತಿತ್ತು.
ಸ್ವತಂತ್ರ ಭಾರತದ ಮೊದಲ ಕ್ಯಾಬಿನೆಟ್ನಲ್ಲಿ ಅವರು ಬಯಸಿದ ಯಾವುದೇ ಸಚಿವ ಸ್ಥಾನವನ್ನು ಅವರು ಆರಿಸಬಹುದಿತ್ತು. ಮುರಿದ ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣವೇ ನಿರ್ಣಾಯಕವೆಂದು ತಿಳಿದಿದ್ದರಿಂದ ಅವರು ಶಿಕ್ಷಣವನ್ನು ಆರಿಸಿಕೊಂಡರು.ಭಾರತದ ಆಧುನಿಕ ಶಿಕ್ಷಣ ವ್ಯವಸ್ಥೆ ರೂಪಿಸಿದ ಮಹಾತ್ಮನ ನೆನಪಿನಲ್ಲಿ ʼರಾಷ್ಟ್ರೀಯ ಶಿಕ್ಷಣ ದಿನʼ
ಕಲಾ ಪ್ರದರ್ಶನಗಳಿಗೆ ಸಂಗೀತ ನಾಟಕ್ ಅಕಾಡೆಮಿ, ದೃಶ್ಯ ಕಲೆಗಳಿಗೆ ಲಲಿತ್ ಕಲಾ ಅಕಾಡೆಮಿ ಮತ್ತು ಸಾಹಿತ್ಯಕ್ಕಾಗಿ ಸಾಹಿತ್ಯ ಅಕಾಡೆಮಿ ಅವರು ರಚಿಸಿದರು. ಅವರು ವಿಶ್ವದಾದ್ಯಂತ ಸಂಸ್ಕೃತಿಯ ಆಡಾನ್ ಪ್ರದಾನ್ ಅಥವಾ ಪರಸ್ಪರ ಸಂಬಂಧಕ್ಕಾಗಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಕೌನ್ಸಿಲ್ ಅನ್ನು ರಚಿಸಲು ಸಹಾಯ ಮಾಡಿದರು. ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಭಾರತೀಯ ತಂತ್ರಜ್ಞಾನ ಸಂಸ್ಥೆಗಳು, ಸಾರ್ವಜನಿಕ ಗ್ರಂಥಾಲಯಗಳು ಮುಂತಾದವನ್ನು ರೂಪಿಸಲು ಹೆಚ್ಚಿನ ಮುತುವರ್ಜಿ ವಹಿಸಿದ್ದರು.
ಇಂದು ಭಾರತವು ಕೋಮು ದ್ವೇಷ, ರೈತರ ಪ್ರತಿಭಟನೆ, ವಿದ್ಯಾರ್ಥಿ ಚಳವಳಿ, ನಾಗರಿಕರು ತಮ್ಮ ಪ್ರಜಾಪ್ರಭುತ್ವ ಹಕ್ಕನ್ನು ಚಲಾಯಿಸುವುದರ ವಿರುದ್ಧ ಕಠಿಣ ಅಭಿಯಾನ ನಡೆಸುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ. ನಾವು ನಮ್ಮ ವಸಾಹತುಶಾಹಿ ಇತಿಹಾಸವನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ , ಆಟಗಾರರು ಮಾತ್ರ ಬದಲಾಗಿದ್ದಾರೆ. ವಸಾಹತುಶಾಹಿಯು ಮತ್ತೊಮ್ಮೆ ಹೊಸ ಅವತಾರದಲ್ಲಿ ಜನಿಸಿದೆ ಎಂದು ವಿಷಾದ ವ್ಯಕ್ತಪಡಿಸುವ ಅವರು ಆಜಾದ್ ಅವರ ಸಂದೇಶವು ಎಂದಿಗೂ ಪ್ರಸ್ತುತತೆ ಕಳೆದುಕೊಳ್ಳದು ಎನ್ನುತ್ತಾರೆ.







