• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಅಪರೂಪದ ಘಟನೆ: ಚುನಾವಣೆಯಲ್ಲಿ ಆಮೀಷವೊಡ್ಡಿದ ಸಂಸದೆಗೆ ಜೈಲು ಶಿಕ್ಷೆ

ಪ್ರತಿಧ್ವನಿ by ಪ್ರತಿಧ್ವನಿ
July 25, 2021
in Uncategorized
0
ಅಪರೂಪದ ಘಟನೆ: ಚುನಾವಣೆಯಲ್ಲಿ ಆಮೀಷವೊಡ್ಡಿದ ಸಂಸದೆಗೆ ಜೈಲು ಶಿಕ್ಷೆ
Share on WhatsAppShare on FacebookShare on Telegram

ಅತ್ಯಂತ ಅಪರೂಪದ ಸನ್ನಿವೇಶದಲ್ಲಿ ಸಂಸದೆಯೊಬ್ಬರು ಮತದಾರರಿಗೆ ಆಮೀಷವೊಡ್ಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದಾರೆ. ಚುನಾವಣೆಯ ವೇಳೆ ಮತದಾರರನ್ನು ಸೆಳೆಯಲು ಹಣ, ಹೆಂಡ ಹಂಚುವುದು ಪ್ರತಿ ಬಾರಿ ವರದಿಯಾದರೂ ಯಾವುದೇ ಜನನಾಯಕರು ದೋಷಿ ಎಂದು ತೀರ್ಪು ಬಂದಿರಲಿಲ್ಲ.

ADVERTISEMENT

2019ರ ಚುನಾವಣೆಯ ವೇಳೆ ಮತದಾರರಿಗೆ ಲಂಚ ನೀಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ತೆಲಂಗಾಣ ರಾಷ್ಟ್ರ ಸಮಿತಿಯ ಸಂಸದೆ ಮಲೋತ್ ಕವಿತಾ ಹಾಗೂ ಅವರ ಆಪ್ತರೊಬ್ಬರನ್ನು ಅವರನ್ನು ನಾಂಪಲ್ಲಿಯ ವಿಶೇಷ ಸೆಷನ್ಸ್ ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ. ಇದರೊಂದಿಗೆ ಇಬ್ಬರಿಗೂ ಆರು ತಿಂಗಳ ಸಜೆ ವಿಧಿಸಿದೆ.

ಸದ್ಯಕ್ಕೆ ಲೋಕಸಭೆಯಲ್ಲಿ ಮೆಹಬೂಬಾಬದಾದ್ ಕ್ಷೇತ್ರವನ್ನು ಪ್ರತಿನಿಧಿಸುವ ಕವಿತಾ ಅವರಿಗೆ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನ್ಯಾಯಾಲಯ ಜಾಮೀನು ಕೂಡ ಮಂಜೂರು ಮಾಡಿದೆ.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ತೆಲಂಗಾಣದ ಹಾಲಿ ಸಂಸದರೊಬ್ಬರು ಚುನಾವಣೆಯಲ್ಲಿ ಅಕ್ರಮ ಎಸಗಿದ ಕಾರಣಕ್ಕೆ ಜೈಲು ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

2019ರ ಲೋಕಸಭಾ ಚುನಾವಣೆಯ ಕವಿತಾ ಅವರ ಆಪ್ತನಾದ ಶೌಕತ್ ಅಲಿ ಎಂಬವರು ಮತದಾರರಿಗೆ ತಲಾ 500 ರೂ. ಹಂಚುವಾಗ ಫ್ಲೈಯಿಂಗ್ ಸ್ಕ್ವಾಡ್ ಕೈಗೆ ಸಿಕ್ಕಿಬಿದ್ದಿದ್ದರು. ಅವರು ಕವಿತಾ ಅವರ ಪರವಾಗಿಯೇ ಹಣ ಹಂಚುತ್ತಿದ್ದರು ಎಂಬುದನ್ನು ಶೌಕತ್ ಅಲಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ, ಎಂದು ಸರ್ಕಾರದ ಪರ ವಕೀಲ ಜಿ ನಾರಾಯಣ ಹೇಳಿದ್ದರು.

ಪ್ರಕರಣದ ನ್ಯಾಯಾಧೀಶರಾಗಿದ್ದ ವರಪ್ರಸಾದ್ ಅವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಸೆಕ್ಷನ್ 171-E (ಆಮೀಶವೊಡ್ಡಿರುವುದಕ್ಕೆ ಶಿಕ್ಷೆ) ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಜತೆಯಲ್ಲಿ ತಲಾ 10,000 ರೂ. ದಂಡವನ್ನು ಕೂಡಾ ವಿಧಿಸಲಾಗಿದೆ. ಶಿಕ್ಷೆಯ ಪ್ರಮಾಣ ಪ್ರಕಟಿಸುವಾಗ ಇಬ್ಬರು ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.

ಶಾಸಕರು ಮತ್ತು ಸಂಸದರಿಗಾಗಿ ವಿಶೇಷ ಸೆಷನ್ಸ್ ನ್ಯಾಯಾಲಯವನ್ನು 2018ರಲ್ಲಿ ಸುಪ್ರಿಂ ಕೋರ್ಟ್ ನ ಆದೇಶದ ಮೇರೆಗೆ ರಚಿಸಲಾಗಿತ್ತು. ಇತ್ತೀಚಿಗೆ, ಬಿಜೆಪಿ ಶಾಸಕರಾದ ರಾಜಾ ಸಿಂಗ್ ಹಾಗೂ ಟಿಆರ್ಎಸ್ ಶಾಸಕರಾದ ದಾನಂ ನಾಗೆಂದರ್ ಅವರಿಗೂ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು.

Previous Post

ರಾಜ್ಯದಲ್ಲಿ ಉತ್ತರಪ್ರದೇಶ ಮಾದರಿ ಆಡಳಿತಕ್ಕೆ ಆರಂಭವಾಗಿದೆ ಸಿದ್ಧತೆ?

Next Post

ಪೆಗಾಸಸ್‌ನಿಂದ ಕೋಟ್ಯಾಂತರ ಮಂದಿ ನೆಮ್ಮದಿಯಿಂದ ನಿದ್ರಿಸುತ್ತಾರೆ, ಸುರಕ್ಷಿತವಾಗಿ ಸಂಚರಿಸುತ್ತಾರೆ: ಎನ್ಎಸ್ಒ ಸಮರ್ಥನೆ

Related Posts

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ
Uncategorized

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

by ಪ್ರತಿಧ್ವನಿ
April 17, 2026
0

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತ ಚರ್ಚೆ ಸಂಸತ್‌ನಲ್ಲಿ ತೀವ್ರಗೊಳ್ಳುತ್ತಿರುವ ನಡುವೆ, ಸದನದಲ್ಲಿ ರಾಜಕೀಯ ಗದ್ದಲದ ಜೊತೆಗೆ...

Read moreDetails
ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

April 17, 2026
ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

April 16, 2026
ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

April 13, 2026
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
Next Post
ಪೆಗಾಸಸ್‌ನಿಂದ ಕೋಟ್ಯಾಂತರ ಮಂದಿ ನೆಮ್ಮದಿಯಿಂದ ನಿದ್ರಿಸುತ್ತಾರೆ, ಸುರಕ್ಷಿತವಾಗಿ ಸಂಚರಿಸುತ್ತಾರೆ: ಎನ್ಎಸ್ಒ ಸಮರ್ಥನೆ

ಪೆಗಾಸಸ್‌ನಿಂದ ಕೋಟ್ಯಾಂತರ ಮಂದಿ ನೆಮ್ಮದಿಯಿಂದ ನಿದ್ರಿಸುತ್ತಾರೆ, ಸುರಕ್ಷಿತವಾಗಿ ಸಂಚರಿಸುತ್ತಾರೆ: ಎನ್ಎಸ್ಒ ಸಮರ್ಥನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!