ಹಾಸನ(Hassan) ಸಂಸದ ಪ್ರಜ್ವಲ್ ರೇವಣ್ಣರ ಬಂಧನಕ್ಕೆ ಎಸ್‌ಐಟಿಯಿಂದ ಎರಡು ರೀತಿಯ ಅಸ್ತ್ರವನ್ನು ಬಳಕೆ ಮಾಡಿಕೊಳ್ಳಲು ಸಿದ್ಧತೆಗಳನ್ನು ನಡೆಸಲಾಗಿದೆ.
ಮೊದಲನೆಯದು, ವಾರೆಂಟ್ ಪಡೆದು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವುದು. ಎರಡನೆಯದು, ಕೋರ್ಟ್ ಮೂಲಕವೇ ಪ್ರಜ್ವಲ್ ರೇವಣ್ಣರ ಪಾಸ್‌ಪೋರ್ಟ್ ರದ್ಧತಿಗೆ (Cancellation of Passport) ಅರ್ಜಿ ಸಲ್ಲಿಕೆ ಮಾಡುವುದು. ಇನ್ನು ಈ ಎರಡು ಪ್ರಕ್ರಿಯೆಯಲ್ಲೂ ಯಾವುದೇ ಒಂದು ಪ್ರಕ್ರಿಯೆಗೆ ಅನುಮತಿ ಸಿಕ್ಕರೂ, ಪ್ರಜ್ವಲ್ ಬಂಧನ ಸುಲಭ ಎಂಬುದು ಎಸ್‌ಐಟಿ ತಿಳಿಸಿದೆ.











