
ಧರ್ಮಸ್ಥಳ ಕೇಸ್ ಗೆ (Dharmasthala case) ಸಂಬಂಧಪಟ್ಟಂತೆ ರಚನೆಯಾದ SITಗೆ ಸುಜಾತ ಭಟ್ (Sujatha bhat) ಅವರ ಪುತ್ರಿ ಎನ್ನಲಾದ ಅನನ್ಯ ಭಟ್ (Ananya bhat) ಮಿಸ್ಸಿಂಗ್ ಕೇಸ್ ಈಗಾಗಲೇ ವರ್ಗಾವಣೆಯಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ SIT ತನಿಖೆ ಮುಂದುವರಿದಿದೆ. ಎಸ್‌ಐಟಿ ಅನನ್ಯ ಭಟ್ ಕೇಸ್ ಸಂಬಂಧ ಸುಜಾತ ಭಟ್ ವಿಚಾರಣೆ ನಡೆಸಿದೆ.

ಆದ್ರೆ ಸುಜಾತ ಭಟ್ ಅವರಿಗೆ 70ವರ್ಷ ದಾಟಿರುವ ಹಿನ್ನೆಲೆ ಅವರ ಬೆಂಗಳೂರಿನ ನಿವಾಸಕ್ಕೆ ಅಧಿಕಾರಿಗಳೇ ಆಗಮಿಸಿ ವಿಚಾರಣೆ ನಡೆಸಿದ್ದಾರೆ.ಈ ವೇಳೆ ಸುಜಾತ ಭಟ್ ಅವರ ಹೇಳಿಕೆಗಳು SIT ಅಧಿಕಾರಿಗಳಿಗೆ ಗೊಂದಲಮಯವಾಗಿ ಕಂಡುಬಂದಿದೆ. ಈ ವೃದ್ಧೆ ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗೂ, ನೀಡಿರುವ ದೂರಿಗೂ ವ್ಯತ್ಯಾಸವಿದೆ ಎಂಬ ಅಂಶವನ್ನು ಗಮನಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಬನಶಂಕರಿ ಬಳಿಯ ಮನೆಯಲ್ಲಿ ವಿಚಾರಣೆ ನಡೆಸಿದರೂ, ಇದುವರೆಗೂ ಯಾವುದೇ ದಾಖಲೆ ಸಿಕ್ಕಿಲ್ಲ, ಅಲ್ಲದೆ ಮಾಧ್ಯಮಗಳಲ್ಲಿ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಾಧ್ಯಮಗಳಲ್ಲಿನ ಹೇಳಿಕೆಗಳನ್ನು SIT ಗಮನಿಸುತ್ತಿದ್ದು, ಸುಳ್ಳು ಕಥೆಗಳ ಚರ್ಚೆ ಕೂಡ ಮುನ್ನೆಲೆಗೆ ಬಂದಿದೆ.
ಹೀಗಾಗಿ ಸುಜಾತ ಭಟ್ ವಿರುದ್ಧ ಮತ್ತೆ ಕೇಸ್ ದಾಖಲಿಸಿಕೊಳ್ಳಲು ಚಿಂತನೆ ನಡೆದಿದೆ, ಜೊತೆಗೆ ವಿಚಾರಣೆ ನಡೆಸಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.










