ಅತ್ಯಾಚಾರ ಕೇಸ್ (Rape case) ನಲ್ಲಿ ಮುನಿರತ್ನ (Muniratna) ರನ್ನ SIT ಕಸ್ಟಡಿಗೆ ಪಡೆಯೋ ವಿಚಾರವಾಗಿ, ಇಂದು ಬೆಳಗ್ಗೆಯಿಂದ ಅಧಿಕಾರಿಗಳು ಮುನಿರತ್ನಗೆ ವಿಚಾರಣೆ ನಡೆಸುತ್ತಿದ್ದಾರೆ.
ತನಿಖಾಧಿಕಾರಿಗಳಾದ ಸೌಮ್ಯಲತಾ ಮತ್ತು ಸಿ.ಎ.ಸೈಮನ್ ವಿಚಾರಣೆ ನಡೆಸಿದ್ದಾರೆ.ಇಂದು ಸದ್ಯ ಪ್ರಾಥಮಿಕವಾಗಿ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿಗಳು,ಅತ್ಯಾಚಾರ ಆರೋಪದ ಬಗ್ಗೆ ಪ್ರಶ್ನೆಗಳನ್ನ ಮುಂದಿಟ್ಟು ವಿಚಾರಣೆ ಮಾಡಿದ್ದಾರೆ. ಜೊತೆಗೆಆರೋಪಿ ಮುನಿರತ್ನ ಹೇಳಿಕೆಯನ್ನ ಅಧಿಕಾರಿಗಳು ದಾಕಲಿಸಿಕೊಂಡಿದ್ದಾರೆ.
ಇನ್ನಷ್ಟು ವಿಚಾರಣೆಯ ಬಳಿಕ ನಾಳೆ ಅಥವಾ ನಾಡಿದ್ದು ಆರೋಪಿ ಶಾಸಕ ಮುನಿರತ್ನ ರನ್ನ ಕರೆದೊಯ್ದು ಸ್ಥಳ ಮಹಜರು ಮಾಡುವ ಸಾಧ್ಯತೆಯಿದೆ.












