
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಐಪಿಎಸ್ ಅಧಿಕಾರಿ, ಎಸ್.ಐ.ಟಿ ಐಜಿ ಚಂದ್ರಶೇಖರ್ ನಡುವಿನ ಹಗ್ಗಜಗ್ಗಾಟ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. IPS ಅಧಿಕಾರಿಯನ್ನ ಕೆಣಕಿ HDK ಅಂದು ಸುದ್ದಿಗೋಷ್ಠಿಯಲ್ಲಿ ಆಡಿದ ಮಾತುಗಳು ಅವರಿಗೆ ದೊಡ್ಡ ಸಂಕಷ್ಟ ತಂದಿಟ್ಟಿರುವಂತಿದೆ. ಈ ವೇಳೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರ ಮಾಡಿದ್ದ ಕುಮಾರಸ್ವಾಮಿ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದರು. ಈ ಆರೋಪಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ಚಂದ್ರಶೇಖರ್ ಬಹಳ ಕಠಿಣ ಪದಗಳನ್ನು ಬಳಸಿ ಕೇಂದ್ರ ಸಚಿವರ ವಿರುದ್ಧ ಸಮರ ಸಾರಿದ್ದರು. ಈಗ ಆ ಸಮರ ಮುಂದುವರೆಯುವಂತೆ ಕಾಣ್ತಿದೆ. ಅದಕ್ಕೆ ಕಾರಣ SIT ಹೈಕೋರ್ಟ್ ಮೆಟ್ಟಿಲೇರಲು ನಡೆಸಿರುವ ಸಿದ್ಧತೆಗಳು.
ಹೌದು, 2006 ರಿಂದ 2008 ರ ಅವಧಿಗೆ ಹೆಚ್‌ಡಿಕೆ ಸಿಎಂ ಆಗಿದ್ದ ಸಂದರ್ಭದಲ್ಲಿ ಶ್ರೀ ಸಾಯಿ ವೆಂಕಟರೇಶ್ವರ ಮಿನರಲ್ಸ್ ಮೈನಿಂಗ್ ಕಂಪೆನಿಗೆ ಬಳ್ಳಾರಿಯಲ್ಲಿ ಅಕ್ರಮವಾಗಿ 550 ಎಕರೆ ಭೂಮಿ ಮಂಜೂರು ಮಾಡಿದ್ದ ಆರೋಪದಲ್ಲಿ ಕುಮಾರಸ್ವಾಮಿ ಮೇಲೆ ಕೇಸ್ ದಾಕಲಾಗಿದ್ದು, ಸದ್ಯ ಈ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನಿನ ಮೇಲೆ ಹೊರಗಿದ್ದಾರೆ. ಆದ್ರೆ ಇದೀಗ ಎಸ್.ಐ.ಟಿ ಈ ಪ್ರಕರಣದಲ್ಲಿ ಜಾಮೀನು ರದ್ದು ಕೋರಿ ಕೋರ್ಟ್ ಮೊರೆ ಹೋಗಲು ಮುಂದಾಗಿದೆ ಎಂಬ EXLUSIVE ಮಾಹಿತಿ ಪ್ರತಿಧ್ವನಿಗೆ ಲಭ್ಯವಾಗಿದೆ.

ಹೌದು, ಈಗಾಗಲೇ ಈ ಅಕ್ರಮ ಭೂಮಿ ಮಂಜೂರಾತಿ ಪ್ರಕರಣದಲ್ಲಿ ತನಿಖೆ ನಡೆದು, ವಿಚಾರಣೆಗಳು ಜರುಗಿ ಸದ್ಯ ಕುಮಾರಸ್ವಾಮಿ ಜಾಮೀನು ಪಡೆದು ಸೇಫ್ ಝೋನ್ ನಲ್ಲಿದ್ರು ಮತ್ತೊಂದೆಡೆ ತನಿಖೆ ಮಾತ್ರ ಮುಂದುವರೆದಿತ್ತು. ಇದೀಗ ಕುಮಾರಸ್ವಾಮಿ ಜಾಮಿನನ್ನ ರದ್ದು ಮಾಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಉನ್ನತ ಅಧಿಕಾರಿಗಳಿಗೆ ಕುಮಾರಸ್ವಾಮಿ ಪರೋಕ್ಷವಾಗಿ ಬೆದರಿಸುವ ಕೆಲಸ ಮಾಡಿದ್ದಾರೆ. ಆ ಮೂಲಕ ತನಿಖಾ ತಂಡದ ಸಿಬ್ಬಂದಿಯ ಸ್ಥೈರ್ಯವನ್ನು ಕುಗ್ಗಿಸುವ ಹುನ್ನಾರ ಮಾಡಿದ್ದಾರೆ. ಹೀಗಾಗಿ ತನಿಖಾ ಸಂಸ್ಥೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಜಾಮೀನಿನ ಮೇಲೆ ಹೊರಗಿರುವುದು ಸರಿಯಲ್ಲ . ಈ ಕೂಡಲೇ ಅವರ ಜಮೀನನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ ಕದ ತಟ್ಟಲಿದ್ದಾರೆ. ಒಂದುವೇಳೆ ಜಾಮೀನು ರದ್ದಾದ್ರೆ ಕುಮಾರಸ್ವಾಮಿಗೆ ಬಂಧನ ಭೀತಿ ಎದುರಾಗಲಿದೆ.
ಈ ಮೂಲಕ ಕಳೆದ ಹಲವು ದಿನಗಳಿಂದಲೂ ತನ್ನನ್ನು ಬಂಧಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಕುಮಾರಸ್ವಾಮಿ ನಿರಂತರವಾಗಿ ಮಾಡಿದ್ದ ಆರೋಪಕ್ಕೆ ಈಗ ಪುಷ್ಠಿ ಸಿಕ್ಕಂತಾಗಿದ್ದು, ಈ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ರದ್ದು ಪಡಿಸಲು ನ್ಯಾಯಾಲಯ ಸೂಚಿಸಿದ್ರೆ, ವಿಚಾರಣೆಯ ನಿಮಿತ್ತ ಎಸ್.ಐ.ಟಿ ಕುಮಾರಸ್ವಾಮಿಯನ್ನ ಕಸ್ಟಡಿಗೆ ಪಡೆಯೋ ಸಾಧೆ ದಟ್ಟವಾಗಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಮಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.
