ಅನನ್ಯಾ ಭಟ್ ಮಿಸ್ಸಿಂಗ್ ಪ್ರಕರಣಕ್ಕೆ (Ananya bhat case) ಸಂಬಂಧಿಸಿದಂತೆ ಸುಜಾತ ಭಟ್ ರನ್ನು (Sujatha bhat) ಎಸ್‌ಐಟಿ (SIT) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಎರಡು ದಿನಗಳ ತನಿಖೆಯ ವೇಳೆ ಹಲವು ಸಂಗತಿಗಳು ಬಹಿರಂಗವಾಗಿದ್ದು, ಇಂದು (ಆ.28) ಎಸ್ ಐ ಟಿ ಅಂತಿಮ ಹಂತದ ವಿಚಾರಣೆ ನಡೆಸಲಿದೆ.

ಈ ಪ್ರಕರಣದ ತನಿಖಾಧಿಕಾರಿ ಎಸ್‌ಐ ಗುಣಪಾಲ್ ಮತ್ತು ದಯಾಮಾರಿಂದ ಸುಜಾತಾ ಭಟ್ ನಡೆಸಲಾಗಿದ್ದು, ಪ್ರಭಾವಿಗಳ ಕೈವಾಡ ಮತ್ತು ಪಿತೂರಿಯ ಬಗ್ಗೆ ಸುಜಾತಾ ಮಾಹಿತಿ ಬಿಚ್ಚಿಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ತನ್ನ ಸುತ್ತ ಹೆಣೆದ ವ್ಯೂಹದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿರೋ ಸುಜಾತ ಭಟ್ ಇಂದು ಅಂತಿಮ ಹಂತದ ವಿಚಾರಣೆ ಎದುರಿಸಲಿದ್ದಾರೆ .

ಅನನ್ಯ ಭಟ್ ಮಿಸ್ಸಿಂಗ್ ಕೇಸ್ ಸುಳ್ಳು ಅನ್ನೋದು ಗೊತ್ತಾಗ್ತಿದ್ದಂತೆ ಸುಜಾತಾ ಭಟ್ ಏಕಾಂಗಿಯಾಗಿದ್ದಾರೆ. ಆರಂಭದಲ್ಲಿ ನನ್ನ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯ ಅಸ್ತಿಯನ್ನ ಹುಡುಕಿಕೊಡಿ ಅಂತ ಸುಜಾತ ಭಟ್ ಕಾರಿನಲ್ಲಿ ಬಂದು ದೂರು ಕೊಟ್ಟಿದ್ದರು.ಆ ನಂತರ ಸುಳ್ಳು ಫೋಟೋ ತೋರಿಸಿ ಸುಜಾತ ಭಟ್ ತಗ್ಲಾಕಿಕೊಂಡಿದ್ದು, ಮಾಧ್ಯಮ ಹಾಗೂ ಬುರುಡೆ ಗ್ಯಾಂಗ್ ಮುಂದೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರು.
ಹೀಗಾಗಿ ಸುಜಾತ ಭಟ್‌ರನ್ನ ಬುರುಡೆ ಗ್ಯಾಂಗ್ ದೂರ ಮಾಡಿದೆ ಅಂತ ಹೇಳಲಾಗ್ತಿದ್ದು, ಆಟೋದಲ್ಲಿ ತಾವೊಬ್ಬರೇ ಏಕಾಂಕಿಯಾಗಿ ಬಂದು ವಿಚಾರಣೆಗೆ ಹಾಜರಾಗುತ್ತಿದ್ದಾರೆ.











