ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ಸಿಂಗಲ್ ಸಿಗರೇಟ್ ಪರಿಣಾಮ ಬೀರುತ್ತದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿಯು ಅಭಿಪ್ರಾಯಪಟ್ಟಿದ್ದು, ಸಿಂಗಲ್ ಸಿಗರೇಟ್ ಮಾರಾಟವನ್ನ ನಿಷೇಧಿಸಲು ಪ್ರಸ್ತಾವನೆ ಸಲ್ಲಿಸಿದೆ.
ಧೂಮಪಾನಿಗಳಿಗೆ ಕೇಂದ್ರ ಸರ್ಕಾರ ಕಹಿ ಸುದ್ದಿಯನ್ನು ನೀಡಲು ಮುಂದಾಗಿದ್ದು, ದೇಶದಲ್ಲಿ ಸಿಂಗಲ್ ಸಿಗರೇಟ್ ಮಾರಾಟವನ್ನು ಸದ್ಯದಲ್ಲೇ ನಿಷೇಧಿಸುವ ಸಾಧ್ಯತೆ ಇದೆ.
ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ಸಿಂಗಲ್ ಸಿಗರೇಟ್ ಪರಿಣಾಮ ಬೀರುತ್ತದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿಯು ಅಭಿಪ್ರಾಯಪಟ್ಟಿದ್ದು, ಸಿಂಗಲ್ ಸಿಗರೇಟ್ ಮಾರಾಟವನ್ನ ನಿಷೇಧಿಸಲು ಪ್ರಸ್ತಾವನೆ ಸಲ್ಲಿಸಿದೆ.
ದಿನದಿಂದ ದಿನಕ್ಕೆ ಸಿಂಗಲ್ ಸಿಗರೇಟ್ ಬಳಕೆ ಹೆಚ್ಚಾಗುತ್ತಿದ್ದು, ವಿಮಾನ ನಿಲ್ದಾಣದ ಧೂಮಪಾನ ವಲಯವನ್ನು ಮುಚ್ಚುವಂತೆ ಕೂಡ ಸ್ಥಾಯಿ ಸಮಿತಿಯು ಪ್ರಸ್ತಾಪಿಸಿದೆ.
ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್, ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದು, ಯುವ ಜನರು ಸಿಗರೇಟ್ ಚಟಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಸಾಮಾನ್ಯ ಬಜೆಟ್ ನಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಕೂಡ ಹೆಚ್ಚಳವಾಗುವ ಸಾಧ್ಯತೆ ಇದ್ದು, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನ ಕ್ಯಾನ್ಸರ್ ಪೀಡಿತರ ಚಿಕಿತ್ಸೆಯಲ್ಲಿ ಬಳಸಲಾಗುವುದು ಎಂದು ಹೇಳಲಾಗಿದೆ.