ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಮಂಗಳವಾರ ಸಂಜೆ ನಿಧನರಾದರು.
ಕೋಲ್ಕತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡ ಕೆಕೆ ಎಂದಿನಂತೆ ಅಭಿಮಾನಿಗಳನ್ನು ಸಂಗೀತದ ಅಮಲಿನಲ್ಲಿ ತೇಲಿಸಿದ್ದಾರೆ. ಕಾರ್ಯಕ್ರಮ ಮುಗಿಸಿ ಹೊಟೆಲ್ ಸೇರಿಕೊಂಡ ಬೆನ್ನಲ್ಲೇ ತೀವ್ರ ಆಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಿದರು ಪ್ರಯೋಜನವಾಗಿಲ್ಲ. ಸಾವನಪ್ಪಿರುವ ವಿಷಯವನ್ನು ವೈದ್ಯರು ದೃಢಪಡಿಸಿದ್ದಾರೆ.

ಕೆಕೆ ಅವರಿಗೆ ಕೇವಲ 54 ವರ್ಷ ವಯಸ್ಸಾಗಿತ್ತು. ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
ಕೈಟ್ಸ್ ಚಿತ್ರದ “ಜಿಂದಗಿ ದೋ ಪಾಲ್ ಕಿ”, ಓಂ ಶಾಂತಿ ಓಂ ಚಿತ್ರದ “ಆಂಖೋನ್ ಮೇ ತೇರಿ”, ಬಚ್ನಾ ಏ ಹಸೀನೋ ಚಿತ್ರದ “ಖುದಾ ಜಾನೆ”, ಹಮ್ ಚಿತ್ರದ “ತಡಪ್ ತಡಪ್” ಮುಂತಾದ ಹಾಡುಗಳಿಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.










