ಕೆಲವರು ಎಷ್ಟೆ ಹಲ್ಲುಗಳನ್ನ ಗುಜ್ಜಿ ಸ್ವಚ್ಛ ಮಾಡಿದ್ರು ಹಳದಿ ಬಣ್ಣ ಇರುತ್ತದೆ..ಹಲ್ಲುಗಳು ಹಳದಿ ಇದ್ದರೆ ನಗಲು ಮುಜುಗರ ಅಥವ ಹಿಂಜರಿಯುತ್ತಾರೆ..ಹಾಗು ಮುಖದ ಅಂದವನ್ನ ಕೆಡಿಸುತ್ತದೆ ಈ ಹಳದಿ ಹಲ್ಲುಗಳು..ನಿಮ್ಮ ಹಲ್ಲುಗಳು ಮುತ್ತಿನಂತೆ ಕಾಣ್ಬೇಕು ಬಿಳಿ ಆಗ್ಬೇಕು ಅಂದ್ರೆ ಹೀಗೆ ಮಾಡಿ..
ಎರಡು ಬಾರಿ ಹಲ್ಲುಜ್ಜಿ
ನಿಮ್ಮ ಹಲ್ಲುಗಳು ಸ್ವಚ್ಛವಾಗಬೇಕು ಅಂದ್ರೆ ದಿನಕ್ಕೆ ಎರಡು ಭಾರಿ ಹಲ್ಲುಜ್ಜುವುದು ತುಂಬಾನೆ ಮುಖ್ಯ.ಇದರಿಂದ ಭಾಯಲ್ಲಿರುವ ಕೊಳಕು ಹಾಗು ಹಳದಿ ಬಣ್ಣ ಶಮನ ಮಾಡುತ್ತದೆ.
ಉಪ್ಪು ಹಾಗೂ ನಿಂಬೆ ರಸ
ವಾರಕ್ಕೆ ಒಂದು ಅಥವಾ ಎರಡು ಭಾರಿ ಅರ್ಧ ಟೇಬಲ್ ಸ್ಪೂನ್ ಅಷ್ಟು ಉಪ್ಪಿಗೆ ಅದಕ್ಕೆ ಬೇಕಾದಷ್ಟು ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ ನಂತರ ಆ ಪೇಸ್ಟ್ ಇಂಡಾ ಹಲ್ಲು ಉಜ್ಜುವುದರಿಂದ ಹಲ್ಲು ಹಳದಿ ಆಗಿರೋದು ಕಡಿಮೆ ಆಗುತ್ತದೆ.
ಎಣ್ಣೆ
ಒಂದು ಟೇಬಲ್ ಸ್ಪೂನ್ ಅಷ್ಟು ಕೊಬ್ರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನ ಬಾಯಿಗೆ ಹಾಕಿ 15 ರಿಂದ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಅದನ್ನು ಉಗಿದು ,ಬೆಚ್ಚಗಿನ ನೀರಿನಿಂದ ಬಾಯಿಯನ್ನ ತೊಳೆಯುವುದರಿಂದ ನಿಮ್ಮ ಹಲ್ಲುಗಳು ಶುದ್ಧವಾಗುತ್ತದೆ.ಕ್ಯಾವಿಟಿಸ್ ಕಡಿಮೆಯಾಗುತ್ತದೆ ಹಳದಿ ಹಲ್ಲುಗಳು ಬಿಳುಪಾಗುತ್ತದೆ.