ಬೀದರ್ : ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆ (ರಿ) ಯಾಕತಪೂರ್ ವತಿಯಿಂದ ಸರಳ ಸಾಮೂಹಿಕ ವಿವಾಹ ಆಯೋಜನೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕುಪೇಂದ್ರ ಹೊಸಮನಿ ತಿಳಿಸಿದ್ದಾರೆ.
ಸರಳ ಸಾಮೂಹಿಕ ವಿವಾಹವಾಗಲು ಇಚ್ಛಿಸುವ ಪರಿಶಿಷ್ಟ ಜಾತಿ (SC ) ಹಾಗೂ ಪರಿಶಿಷ್ಟ ಪಂಗಡ (ST) ಸಮುದಾಯದ ವಧು-ವರರು ದಿನಾಂಕ ಜುಲೈ ೨೦ರ ಒಳಗಾಗಿ ಹೆಸರು ನೊಂದಾಯಿಸಿಕೋಳ್ಳಲು ತಿಳಿಸಲಾಗಿದೆ.
ನೂತನ ವಧು-ವರರಿಗೆ ಕರ್ನಾಟಕ ಘನ ಸರ್ಕಾರದ ವತಿಯಿಂದ (SC ) ಜೋಡಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ೫೦ ಸಾವಿರ ರೂಪಾಯಿ ಧನ ಸಹಾಯ (ST) ಜೋಡಿಗಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ Rs 50,000 ರೂಪಾಯಿ ಧನ ಸಹಾಯ ಮಂಜುರು ಮಾಡಿಸಲಾಗುವುದು.
ವಧು-ವರರು ಸಲ್ಲಿಸಬೇಕಾದ ದಾಖಲೆಗಳು.
ವರನ ವಯಸ್ಸು 21 ವಧುವಿನ ವಯಸ್ಸು 18 ಕಡ್ಡಾಯವಾಗಿ ಪೂರ್ಣಗೊಂಡಿರಬೇಕು. ಆಧಾರ ಕಾರ್ಡ್, ಬಿ.ಪಿ.ಎಲ್ ಪಡಿತರ ಚೀಟಿ, ಎಸ್.ಎಸ್.ಎಲ್.ಸಿ ಅಂಕಪಟಿ / ವರ್ಗಾವಣೆ ಪ್ರಮಾಣ ಪತ್ರ ಅಥವಾ ಜನನ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾನ್ ಕಾರ್ಡ್, 2ಪಾಸ್ ಪೋರ್ಟ್ ಸೈಜ್ ಫೋಟೋದೊಂದಿಗೆ ಬೀದರ ತಾಲೂಕಿನ ಯಾಕತಪೂರ್ ಗ್ರಾಮದಲ್ಲಿರುವ ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ ಕೇಂದ್ರ ಕಛೇರಿಗೆ ಸಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸರಳ ಸಾಮೂಹಿಕ ವಿವಾಹ ಆಯೋಜನೆ ಸಮಿತಿಯ ಮುಖ್ಯಸ್ಥರು ಹಾಗೂ ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕುಪೇಂದ್ರ ಹೊಸಮನಿ ದೂರವಾಣಿ ಸಂಖ್ಯೆ ಃ-8296159891 /8951315190 ಗೆ ಸಂಪರ್ಕಿಸಲು ಕೋರಲಾಗಿದೆ.