ಕೆಲವರ ಮನೆಯ ಗೋಡೆಯಲ್ಲಿ ಹಲ್ಲಿಗಳು ಹೆಚ್ಚಿರುತ್ತವೆ, ಹಲ್ಲಿಗಳ ಕಾಟ ಜಾಸ್ತಿ ಆದ್ರೆ. ಒಂತರಾ ಕಸಿವಿಸಿ ಹಾಗೂ ಭಯ ಕೂಡ ಇರುತ್ತದೇ. ಅದ್ರಲ್ಲೂ ಮಾಡಿಟ್ಟ ಆಹಾರದಲ್ಲಿ ಹಲ್ಲಿ ಏನಾದ್ರು ಬಿದ್ರೆ ಆರೋಗ್ಯಕ್ಕೆ ತುಂಬಾನೆ ಹಾನಿ ಅಂತ ಎಲ್ಲರಿಗೂ ಗೊತ್ತಿದೆ.ಹಾಗೂ ಶಾಸ್ತ್ರದ ಪ್ರಕಾರ ಮೈಮೇಲೆ ಹಲ್ಲಿ ಬೀಳುವುದು ಕೆಟ್ಟದರ ಸಂಕೇತ ಅಂತನೂ ಹೇಳ್ತಾರೆ. ಹಲ್ಲಿಗಳನ್ನ ಓಡಿಸಲು ಎಷ್ಟೇ ಟ್ರೈ ಮಾಡಿದರೂ ಅವುಗಳು ಮತ್ತೆ ಮತ್ತೆ ಬರ್ತಾನೆ ಇರುತ್ತವೆ. ಅದರಲ್ಲೂ ಕೆಲವರಿಗೆ ಹಲ್ಲಿ ಹತ್ತಿರ ಹೋಗೋದಕ್ಕೆ ತುಂಬಾನೇ ಭಯಪಡ್ತಾರೆ. ಅಂತವರು ಹಲ್ಲಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಅಥವಾ ಈಜಿಯಾಗಿ ಅವುಗಳನ್ನ ಓಡಿಸಲು ಈ ಸಿಂಪಲ್ ಹ್ಯಾಕ್ಟನ್ನು ಟ್ರೈ ಮಾಡಿ.
ಅದರಲ್ಲೂ ಕೆಲವರಿಗೆ ಹಲ್ಲಿ ಹತ್ತಿರ ಹೋಗೋದುಕ್ಕು ತುಂಬಾನೇ ಭಯಪಡ್ತಾರೆ ಅಂತವರು ಹಲ್ಲಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಅಥವಾ ಈಜಿಯಾಗಿ ಅವುಗಳನ್ನ ಓಡಿಸಲು ಈ ಸಿಂಪಲ್ ಹ್ಯಾಕ್ಟನ್ನು ಟ್ರೈ ಮಾಡಿ
ಅರಿಶಿಣ ಮತ್ತು ನೀರು
ಒಂದು ಲೀಟರ್ ಅಷ್ಟು ನೀರಿಗೆ ಒಂದು ಟೇಬಲ್ ಸ್ಪೂನ್ ನಷ್ಟು ಅರಿಶಿನವನ್ನು ಮಿಕ್ಸ್ ಮಾಡಿ ನಂತರ ಹಲ್ಲಿಗಳು ಬರುವ ಜಾಗಕ್ಕೆ ಸ್ಪ್ರೇ ಮಾಡುವುದರಿಂದ ಹಲ್ಲಿಗಳ ಕಾಟ ತಪ್ಪುತ್ತದೆ.
ಕಾರದಪುಡಿ
ಮನೆಯಲ್ಲಿ ಅಡುಗೆಗೆ ಬಳಸುವಂತಹ ಕಾರದಪುಡಿ ಅಂದರೆ ಕೆಂಪು ಮೆಣಸಿನಕಾಯಿ ಪುಡಿಯನ್ನು ಒಂದು ಲೀಟರ್ ಅಷ್ಟು ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಹಲ್ಲಿಗಳು ಬರುವ ಜಾಗಕ್ಕೆ ಹಾಗೂ ಹಲ್ಲಿಗಳು ಇರುವ ಜಾಗದಲ್ಲಿ ಆ ನೀರನ್ನ ಸಿಂಪಡಿಸುವುದರಿಂದ ಕಡಿಮೆಯಾಗುತ್ತದೇ. ಸ್ಪ್ರೇ ಮಾಡುವಾಗ ಅಪ್ಪಿ ತಪ್ಪಿ ಕಣ್ಣಿಗೆ ಕಾರ ಬಿದ್ದರೆ ತೊಂದರೆ ಆಗುತ್ತದೆ. ಹಾಗೂ ಮಕ್ಕಳಿಂದ ಆ ನೀರನ್ನು ದೂರವಿಡಿ.
ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನ ಒಗ್ಗರಣೆಗೆ ಮಾತ್ರವಲ್ಲದೇ ಇತರೆ ಹ್ಯಾಕ್ ಗಳಿಗೂ ಕೂಡ ಬಳಸಬಹುದು. ಬೆಳ್ಳುಳ್ಳಿ ವಾಸನಿಗೆ ಹಳ್ಳಿಗಳು ದೂರವಿರುತ್ತವೆ ,ಹಾಗಾಗಿ ಮನೆಯಲ್ಲಿ ಹಲ್ಲಿಗಳು ಓಡಾಡುವ ಬಾಗಿಲು ,ಕಿಟಕಿ ಅಥವಾ ಇತರೆ ಸ್ಥಳಗಳಲ್ಲಿ ಬೆಳ್ಳುಳ್ಳಿಯನ್ನು ಕತ್ತರಿಸಿ ಇಡಬೇಕು.ಹೀಗೆ ಮಾಡುವುದರಿಂದ ಹಲ್ಲಿ ಕಾಟದಿಂದ ಮುಕ್ತಿ ಸಿಗುತ್ತದ.