ಸಿಕ್ಕಿಂ: ಏ.೦೪: ಇಂದು ಮಧ್ಹಾಹ್ನ ಸಿಕ್ಕಿಂನಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಕನಿಷ್ಠ ಆರು ಪ್ರವಾಸಿಗರು ಮೃತಪಟ್ಟಿದ್ದಾರೆ. ಹಿಮಪಾತದಿಂದ ಆರು ಪ್ರವಾಸಿಗರನ್ನು ರಕ್ಷಿಸಲಾಗಿದೆ. ಭಾರತ-ಚೀನಾ ಗಡಿಯಲ್ಲಿ ಗ್ಯಾಂಗ್ಟಾಕ್ ಮತ್ತು ನಾಥುಲಾವನ್ನು ಸಂಪರ್ಕಿಸುವ ಜವಾಹರಲಾಲ್ ನೆಹರು ರಸ್ತೆಯ 14 ನೇ ಮೈಲಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಐವತ್ತಕ್ಕೂ ಹೆಚ್ಚು ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
“ಮೃತರಲ್ಲಿ ನಾಲ್ವರು ಪುರುಷರು, ಒಬ್ಬ ಮಹಿಳೆ ಮತ್ತು ಮಗು ಸೇರಿದ್ದಾರೆ. ಇವರ ಗುರುತು ಪತ್ತೆಯಾಗಿಲ್ಲ” ಎಂದು ಸಿಕ್ಕಿಂ ಪೊಲೀಸ್‌ನ ಇನ್ಸ್‌ಪೆಕ್ಟರ್ ಜನರಲ್ಸೋ ನಮ್ ತೇನ್ಸಿಂಗ್ ಭುಟಿಯಾ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ದವರೆಗಿನ ಮಾಹಿತಿಯಂತೆ ಸುಮಾರು 50 ಪ್ರವಾಸಿಗರು ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ರಕ್ಷಣಾತಂಡಗಳು ಪ್ರಯತ್ನಿಸುತ್ತಿವೆ. ಹಲವು ಪ್ರವಾಸಿಗರು ಹಿಮಪಾತದಲ್ಲಿ ಸಿಲುಕಿದ್ದಾರೆ. ರಾಜ್ಯ ಪೊಲೀಸರು ಮತ್ತು ಸ್ಥಳೀಯ ಸ್ವಯಂಸೇವಕರು ಅವರ ರಕ್ಷಣೆಗೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರವಾಸಿಗರಿಗೆ 13 ನೇ ಮೈಲ್‌ವರೆಗೆ ಹೋಗಲು ಅನುಮತಿ ನೀಡಲಾಗಿದ್ದರೂ, ಅನೇಕರು 15 ನೇ ಮೈಲ್‌ಗೆ ಹೋಗಿದ್ದರು ಎಂದು ಸಿಕ್ಕಿಂ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 80 ಪ್ರವಾಸಿಗರು ಹಿಮಕುಸಿತದಿಂದ ಗಾಯಗೊಂಡಿರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಇವರಲ್ಲಿ ಮೂವತ್ತು ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡವರನ್ನು ರಾಜ್ಯ ರಾಜಧಾನಿ ಗ್ಯಾಂಗ್ಟಾಕ್‌ನ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.
ಗ್ಯಾಂಗ್ಟಕ್ ಅನ್ನು ನಾಥು ಲಾ ಜತೆ ಸಂಪರ್ಕಿಸುವ ಜವಾಹರಲಾಲ್ ನೆಹರು ರಸ್ತೆಯಲ್ಲಿನ 15ನೇ ಮೈಲಿಯಲ್ಲಿ ಮಂಗಳವಾರ ಬೆಳಿಗ್ಗೆ 11.10ರ ವೇಳೆಗೆ ಹಿಮಪಾತ ಅಪ್ಪಳಿಸಿದೆ. ಆ ಸಮಯದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಪ್ರವಾಸಿಗರು ಆ ಪ್ರದೇಶದಲ್ಲಿದ್ದರು ಎನ್ನಲಾಗಿದೆ.

ಸಿಕ್ಕಿಂನ ಕೆಲವು ಎತ್ತರದ ಪ್ರದೇಶಗಳಲ್ಲಿ ಮಾರ್ಚ್ 11ರ ಮಧ್ಯಾಹ್ನ ಭಾರೀ ಹಿಮಪಾತವಾಗಿತ್ತು. ಈ ಸಂದರ್ಭದಲ್ಲಿ ಸುಮಾರು 400 ಪ್ರವಾಸಿಗರೊಂದಿಗೆ ಕನಿಷ್ಠ 100 ವಾಹನಗಳು ಸಿಕ್ಕಿಹಾಕಿಕೊಂಡಿವೆ. ಈ ರೀತಿ ವಾಹನಗಳಲ್ಲಿ ಸಿಲುಕಿದ ಪ್ರವಾಸಿಗರನ್ನು ರಾಜ್ಯ ಪೊಲೀಸ್ ಮತ್ತು ನಾಗರಿಕ ಆಡಳಿತದ ಸಹಯೋಗದೊಂದಿಗೆ ತ್ರಿಶಕ್ತಿ ಪೊಲೀಸ್ ಪಡೆಗಳು ಆಪರೇಷನ್ ಹಿಮ್ರಹತ್ ಆರಂಭಿಸಿದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.