ದಾವಣಗೆರೆಯ ಚನ್ನಗಿರಿ (hennagiri) ಲಾಕ್ ಅಪ್ ಡೆತ್ (Lockup death) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Cm siddaramiah) ತುಷ್ಟಿಕರಣದ ರಾಜಕೀಯ ಮಾಡುತ್ತಿದ್ದಾರೆ ಅಂತ ಹುಬ್ಬಳ್ಳಿಯಲ್ಲಿ (Hubli) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahallad Joshi) ಆರೋಪಿಸಿದ್ದಾರೆ. ಸಿದ್ದರಾಮಯ್ಯನವರ ಈ ತುಷ್ಠಿಕರಣದಿಂದ ರಾಜಕಾರಣದ ಹರಾಜಕತೆ ಸೃಷ್ಟಿಯಾಗಿದೆ ಎಂದರು.
ಸಿದ್ದರಾಮಯ್ಯನವರು ಯಾವುದೇ ವಿಚಾರದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿಲ್ಲ. ಅಂಜಲಿ (Anjali). ನೇಹಾ ಹಿರೇಮಠ (Neha Hiremat) ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಆಗಿಲ್ಲ. ಆದರೆ ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಯಾಕೆ ಅಂತ ಪ್ರಶ್ನಿಸಿದ್ದಾರೆ.
ಚನ್ನಗಿರಿಯಲ್ಲಿ ಪೋಲಿಸ್ ಅಧಿಕಾರಿಯನ್ನ ಅಮಾನತುಗೊಳಿಸಿರುವ ಬಗ್ಗೆ ಆಕ್ರೋಶ ಹೊರಹಾಕಿದ ಅವರು ನೀವು ಎಷ್ಟು ತುಷ್ಟಿಕರಣದ ರಾಜಕೀಯ ಮಾಡಿತ್ತಿದ್ದಿರಿ. ನಿಮ್ಮ ಈ ತುಷ್ಟಿಕರಣ ರಾಜಕೀಯದ ಅರಾಜಕತೆ ಸೃಷ್ಟಿ ಆಗುತ್ತದೆ,ಯಾರೇ ಗಲಭೆ ಮಾಡಿದ್ರೂ ತಪ್ಪು ಅದನ್ನು ಖಂಡಿಸಿ ಅಂತ ಸಿದ್ದರಾಮಮಯ್ಯ ವಿರುದ್ಧ ಜೋಶಿ ಗುಡುಗಿದ್ದಾರೆ.