ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಳ್ಳು ಅಂಕಿ-ಅಂಶಗಳನ್ನ ಇಟ್ಟುಕೊಂಡು ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸುಳ್ಳು ಅಂಕಿ-ಅಂಶ ಮುಂದಿಟ್ಟುಕೊಂಡು ಮಾತನಾಡುತ್ತಾರೆ. ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದು, ಅವರು ದಲಿತರ ಬಳಿ ಹೋಗಿ ಬಿಜೆಪಿಯಿಂದ ನಿಮಗೆ ಯಾವ ರೀತಿ ಅನುಕೂಲವಾಗಿದೆ ಎಂದು ಕೇಳಿದರೆ ಜನರೇ ಅದಕ್ಕೆ ಉತ್ತರ ನೀಡುತ್ತಾರೆ. ಅಲ್ಲದೇ ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡಿದ್ದರೆ ಸಿಎಂ ಅಗಿದ್ದ ಅವರು ಏಕೆ ಸೋಲುತ್ತಿದ್ದರು? ಅವರ ಸರ್ಕಾರ ಏಕೆ ಹೋಯ್ತು ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ರಾಜೀನಾಮೆ ಕೊಡಿಸಿದ್ದೇ ಬಿಜೆಪಿ ಸಾಧನೆ ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ ಅವರು, ಯಡಿಯೂರಪ್ಪ ರಾಜೀನಾಮೇ ಕೊಟ್ಟರು. ಆದರೆ ಐದು ವರ್ಷ ಆಡಳಿತ ಮಾಡಿದ್ದ ಸಿದ್ದರಾಮಯ್ಯ ಅವರನ್ನು ರಾಜ್ಯದ ಜನರು ಓಡಿಸಿದರು ಎಂದರು.
ಇದೇ ವೇಳೆ ಸಿಎಂ ಬೊಮ್ಮಾಯಿ ಅವರನ್ನು ನಾಯಿ ಮರಿಗೆ ಹೋಲಿಕೆ ಮಾಡಿರುವ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟ್ ನೀಡಿದ ಈಶ್ವರಪ್ಪ, ಸಿಎಂ ಆಗಿದ್ದವರ ಬಾಯಲ್ಲಿ ಇದು ಬರೋದು ಸರಿಯೇ? ಅವರು ಸಹ 5 ವರ್ಷ ಸಿಎಂ ಆಗಿದ್ದರು, ಆಗ ನಾವು ಈ ರೀತಿ ಹೇಳಬಹುದಿತ್ತು. ನೀವು ನಾಯಿ ಮರಿ, ಹಂದಿ ಮರಿ, ಕತ್ತೆ ಮರಿ ಎಂದು ನಾವು ಕರೆದೇವಾ? ಎಂದು ಪ್ರಶ್ನಿಸಿದ ಅವರು, ನಮಗೆ ಈ ರೀತಿ ಕರಿಯೋದಕ್ಕೆ ಬರುವುದಿಲ್ಲವೇ ಎಂದರು.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿ ವೇಳೆ ಸಿದ್ದರಾಮಯ್ಯ ಹೆಸರು ಕೇಳುತ್ತಿದ್ದಂತೆ ಸಿಡಿಮಿಡಿಗೊಂಡ ಈಶ್ವರಪ್ಪ, ಏಯ್ ತಡಿಯೋ, ಈಗಷ್ಟೇ ಸಿದ್ದೇಶ್ವರ ಶ್ರೀಗಳ ಒಳ್ಳೆಯ ಹೆಸರು ಹೇಳಿ ಬಂದಿದ್ದೇನೆ. ಅದ್ ಯಾವುದೋ ದರಿದ್ರ ಹೆಸರು ಹೇಳಿಸಲು ಹೊರಟ್ಟಿದ್ಯಲ್ಲ. ನನ್ನ ಬಾಯಲ್ಲಿ ಈಗ ಬೇಡ, ಒಳ್ಳೆಯದು ಹೇಳ್ತಿನಿ ಬಿಡು. ನಿನ್ ಬಿಡಲ್ಲ.. ಆಮೇಲೆ ಹೇಳ್ತಿನಿʼ ಎಂದ ಈಶ್ವರಪ್