ಬೆಂಗಳೂರಿನ ಪ್ರತಿಷ್ಠಿತ ಹೋಟೆಲಲ ಒಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಬಾಲಿವುಡ್ ಸಿದ್ದಾರ್ಥ ಕಪೂರ್ ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ವರದಿ ದೃಢಪಡಿಸಿದೆ.
ಸತತ 5 ಘಂಟೆಗಳ ಕಾಲ ವಿಚಾರನೆ ನಡೆಸಿದ ಹಲಸೂರು ಠಾಣಾ ಪೊಲೀಸ್ ಅಧಿಕಾರಿಗಳ ಮುಂದೆ ನಟ ಡ್ರಗ್ಸ್ ಸೇವಿಸಿರುವುದು ಒಪ್ಪಿಕೊಂಡಿದ್ದಾನೆ ಮತ್ತು ಸಮನ್ಸ್ ಜಾರಿ ಮಾಡಿದಾಗಲೆಲ್ಲ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಡಿಸಿಪಿ ಡಾ. ಭೀಮಾಶಂಕರ್.ಎಸ್.ಗುಲೆ ವೈದ್ಯಕೀಯ ವರದಿಯಲ್ಲಿ ನಟ ಗಾಂಜಾ ಹಾಗು ಕೊಕೇನ್ ಸೇವಿಸಿರುವುದು ದೃಢವಾಗಿದೆ. ಆದರೆ, ನಟ ತನ್ನಗೆ ಡ್ರಗ್ಸ್ ಯಾರು ಕೊಟ್ಟರು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಠಾಣೆಯಿಂದ ಹೊರ ಬಂದ ನಂತರ ಮಾತನಾಡಿದ ನಟ ಸಿದ್ದಾಂತ್ ಕಪೂರ್ ನಾನು ಪೊಲೀಸರಿಗೆ ಸಹಕರಿಸುತ್ತಿದ್ದೇನೆ. ತನಿಖೆಯ ವೇಳೆ ಕೇಳಿದ ಎಲ್ಲಾ ಪ್ರಶ್ನೆಗಳಿಗು ಸಹ ಉತ್ತರಿಸಿದ್ದೇನೆ. ಬೆಂಗಳೂರು ಪೊಲೀಸರು ತುಂಬಾ ಒಳ್ಳೆಯವರು ಒಳ್ಳೆಯ ಕೆಲಸವನ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.