ಮಾಜಿ ಸಿಎಂ ಸಿದ್ದರಾಮಯ್ಯ ಜನುಮ ದಿನದ ಅಂಗವಾಗಿ ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಿರುವ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆದೆ ನಡೆಯುತ್ತೆ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಸೇರಿದಂತೆ ಎಲ್ಲರು ಭಾಗವಹಿಸುತ್ತಾರೆ ಎಂದು ಅಮೃತ ಮಹೋತ್ಸವ ಸಮಿತಿ ಸ್ಪಷ್ಟಪಡಿಸಿದೆ.
ಕಳೆದ ಕೆಲವು ದಿನಗಳಿಂದ ಸಿದ್ದರಾಮೋತ್ಸವ ಕಾರ್ಯಕ್ರಮದ ಕುರಿತು ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಲಾಗಿದೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದೆಲ್ಲ ಎದಿದ್ದ ಊಹಾಪೋಹಗಳಿಗೆ ತೆರೆ ಎರೆಯಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಮಿತಿ ಸದಸ್ಯರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ. ಮೊದಲು ಮಾತನಾಡಿದ ಸಮಿತಿ ಮುಖ್ಯಸ್ಥರಾದ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮೊದಲಿಗೆ ಅವರ ಬಳಿ ನಾವು ಜನುಮು ದಿನ ಆಚರಿಸುವ ಬಗ್ಗೆ ಅವರ ಅನುಮತಿ ಕೇಳಿದಾಗ ಅವರು ಒಪ್ಪಿಗೆ ನೀಡಿರಲಿಲ್ಲ.
ನಂತರ ಮುಖಂಡರೆಲ್ಲರು ಅವರ ಮನವೊಲಿಸಿ ಅವರ ಒಪ್ಪಿಗೆ ಪಡೆದಿದ್ಧೇವೆ ಎಂದಿದ್ದಾರೆ. ಕಳೆದ ನಾಲ್ಕು ದಶಕಗಳಿಗೂ ಹೆಚ್ಚುಕಾಲ ಮಾಜಿ ಸಿಎಂ ಸಿದ್ದರಾಮಯ್ಯ ಅನುಭವ ಹೊಂದಿದ್ದಾರೆ. ಒಂದು ಚಿಕ್ಕ ರೈತ ಕುಟುಂಬದಿಂದ ಬಂದವರು ಅವರು ಜನಪರ ಕಾಳಜಿಯ ಸಾಮಾಜಿಕ ಚಿಂತನೆ, ರೈತ ಪರ ಹೋರಾಟ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಕೆಲಸ ಮಾಡಿದ್ದಾರೆ.

ಹಾಗಾಗಿ ಅವರ ಸ್ನೇಹಿತರು, ಹಿತೈಷಿಗಳು ಹಾಗೂ ಅಭಿಮಾನಿಗಳು ಸೇರಿ ಅವರನ್ನ ಗೌರವಿಸಿ ಸನ್ಮಾನಿಸಲು ಸಿದ್ದರಾಮಯ್ಯ ಅವರ ಅನುಮತಿ ಮೇರೆಗೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಸಮಿತಿ ಮುಖ್ಯಸ್ಥ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ನಂತರ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ದ್ದರಾಮಯ್ಯ ಮೊದಲಿಗೆ ಸಮ್ಮತಿ ಸೂಚಿಸಿರಲಿಲ್ಲ ನಂತರ ನಾಯಕರು ಮನವೊಲಿಸಿದ ಕಾರಣ ಅವರು ಕಾರ್ಯಕ್ರಮ ನಡೆಸಲು ಒಪ್ಪಿಗೆ ಸೂಚಿಸಿದ್ದರು.
ಅವರು ಯಾವುದೇ ಕಾರ್ಯಕ್ರಮ ರೂಪಿಸಿದ್ದರೆ ಅದಕ್ಕೆ ಒಂದು ಹಿನ್ನೆಲೆ ಇರುತ್ತಿತ್ತು. ಅವರು ಸ್ಯವಂ ಅನುಭವಿಸಿದ ಕಷ್ಟಗಳನ ಜನರು ಅನುಭವಿಸಿಬಾರದು ಎಂದು ಜನ ಪರ ಯೋಜನೆಗಳನ್ನು ಜಾರಿಗೆ ತಂದರು. ಇದು ಪಕ್ಷ ಒಳಗೊಂಡಂತೆ ನಡೆಸುತ್ತಿರುವ ಕಾರ್ಯಕ್ರಮ ಇದಕ್ಕೆ ಅನ್ಯ ಅರ್ಥವನ್ನು ಕಲ್ಪಿಸುವುದು ಬೇಡ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಈ ರಾಷ್ಟ್ರದಲ್ಲಿ ವಿಭಿನ್ನ ವ್ಯಕ್ತಿತ್ವವನ್ನ ಹೊಂದಿರುವವರು ಸಿದ್ದರಾಮಯ್ಯ. ಎಲ್ಲಾ ರಾಜಕಾರಣಿಗಳ ಜೊತೆ ಅವಿನಾಭಾವ ಸಂಬಂಧ ಹೊಂದಿರುವವರು ಅವರು
ಅವರ ಅನುಭವ ಅಪಾರ ಕರ್ನಾಟಕದ ದೊಡ್ಡ ಆಸ್ತಿ ದೇಶದ ಹಾಗೂ ಹೋಗು ದೂರ ದೃಷ್ಟಿ ಪ್ರಜಾ ಮೌಲ್ಯಗಳ ರಕ್ಷಣೆ ಹಾಗೂ ಜನರ ವಿಶ್ವಾಸ ಗಳಿಸುವುದು ಸುಲಭದ ಮಾತಲ್ಲ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ ಸಲ್ಲುವಾಗಿ ಈ ಕಾರ್ಯಕ್ರಮವನ್ನ ಆಯೋಜಿಯಿಸುತ್ತಿದ್ಧೇವೆ ಎಂದು ಮಾಜಿ ಸಚಿವ ಪಿ.ಜಿ.ಅರ್. ಸಿಂಧ್ಯಾ ತಿಳಿಸಿದ್ದಾರೆ.

ಈ ಕಾರ್ಯಕ್ರಮವನ್ನ ಕಳೆದ 3-4 ತಿಂಗಳು ಕಾಲ ಯೋಜನೆ ರೂಪಿಸಲಾಗಿದೆ. ಸಿದ್ದರಾಮಯ್ಯ ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ ರಾಜ್ಯದ ಅಭಿವೃದ್ಧಿ ಹಾಗೂ ಉತ್ತಮ ಬೆಳೆವಣಿಗೆಗೆ ಇಂದಿನ ಯುವ ಪೀಳಿಗೆಗೆ ಅವರು ಒಂದು ಮಾದರಿ.
ವ್ಯಕ್ತಿ ಪೂಜೆ ಸರ್ವಾಧಿಕಾರನಕ್ಕೆ ಎಡೆ ಮಾಡಿ ಕೊಡುತ್ತದೆ . ಇಡೀ ರಾಜಕೀಯ ಶಕ್ತಿ ಪ್ರದರ್ಶನ ಅಲ್ಲ ದೇಶದಲ್ಲಿ ಸಧ್ಯ ತಲೆ ದೂರಿರುವ ವಿಚಾರವಾಗಿ ಹಾಗೂ ಸಂವಿಧಾನ ಹಾಗೂ ಸಾರ್ವಜನಿಕ ಮೌಲ್ಯಗಳನ್ನು ಉಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಡಾ || ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಸವರಾಜ್ ರಾಯರೆಡ್ಡಿ, ಎಸ್. ಎಸ್. ಮಲ್ಲಿಕಾರ್ಜುನ್, ಜಯಮಾಲ, ಬಿ.ಎಲ್.ಶಂಕರ್, ರಾಜ್ಯಸಭಾ ಸದಸ್ಯರಾದ ಹನುಮಂತಪ್ಪ , ಶಾಸಕರಾದ ಬೈರತಿ ಸುರೇಶ್ ಹಾಗು ಪ್ರಿಯಾಂಕ ಖರ್ಗೆ ಭಾಗವಹಿಸಿದ್ದರು.
