ಕೋಲಾರ: ಏ.೦5: ಮಾಜಿ ಸಿಎಂ ಸಿದ್ದರಾಮಯ್ಯ ಅವ್ರು ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಅದರ ಬಗ್ಗೆ ಚರ್ಚೆ ಮಾಡುವುದು ವ್ಯರ್ಥ ಎಂದು ವಿಧಾನ ಪರಿಷತ್ ಸದಸ್ಯ ವೈ ಎ. ನಾರಾಯಣಸ್ವಾಮಿ ಅವ್ರು ಹೇಳಿದ್ರು. ನಗರದ ಬಿಜೆಪಿ ಕಚೇರಿಯಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವ್ರು, ಸಿದ್ದರಾಮಯ್ಯ ಕೋಲಾರದಿಂದ ಸ್ಲರ್ದೇ ವಿಚಾರಕ್ಕೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವರುಣಾದಲ್ಲಿ ಸ್ಪರ್ಧೆ ಮಾಡಬೇಕು ಎಂದು ಟಿಕೇಟ್ ಘೋಷಣೆ ಮಾಡಿದ್ದಾರೆ ಅಲ್ಲದೆ ಅವರ ಮನೆಯವರನ್ನು ಕೇಳಿ ಚುನಾವಣೆಯಲ್ಲಿ ನಿಲ್ಲುತ್ತೆನೆ ಅಂತ ಹೇಳಿದ್ದಾರೆ.
ಅದು ಒಂದು ದುರಂತ ಸಮೀಕ್ಷೆ ಆದರಿಸಿ ಚುನಾವಣೆಗೆ ಸ್ಪರ್ಧಿಸುತ್ತೆನೆ ಎನ್ನುವುದು ಮತ್ತೊಂದು ದುರುಂತ ಸಮೀಕ್ಷೆ ಆದರಿಸಿ ಚುನಾವಣೆಗೆ ನಿಲ್ಲುವ ಮಟ್ಟಕ್ಕೆ ಇಳಿದಿದ್ದು ಸಿದ್ದರಾಮಯ್ಯ ನವರ ವ್ಯಕ್ತಿತ್ವಕ್ಕೆ ಗೌರವ ತರೋದಿಲ್ಲ ರಾಜ್ಯದ 5 ವರ್ಷ ಮುಖ್ಯಮಂತ್ರಿಯಾಗಿದ್ದವರು ವಿರೋಧ ಪಕ್ಷದ ನಾಯಕರಾಗಿದ್ದವರು ವಿವಿಧ ಭಾಗ್ಯಗಳನ್ನು ಕೊಟ್ಟವರು ಸಿದ್ದರಾಮಯ್ಯ ಆದರೆ ಸಮೀಕ್ಷೆ ಆಧರಿಸಿ ಚುನಾವಣೆಗೆ ನಿಲ್ತುತ್ತೆನೆ ಅನ್ನುವುದು ಅವರ ದುರ್ಬಲ ಮನಸ್ಥಿತಿ ಆ ಮನಸ್ಥಿತಿಗೆ ಗಟ್ಟಿತನವಿಲ್ಲ ಅನ್ನುವುದನ್ನು ತೋರಿಸುತ್ತಿದೆ.
2018 ರಲ್ಲಿ ಚುನಾವಣೆ ಕೊನೆಯ ಚುನಾವಣೆ ಅಂತ ಹೇಳಿದರು ಆದರೆ ಈಗ ಮತ್ತೆ ಸ್ಪರ್ಧೆ ಮಾಡುತ್ತಿದ್ದಾರಡ ಒಂದು ಮಾತು ಹೇಳಿದ ಮೇಲೆ ಅದರ ಮೇಲೆ ನಿಂತುಕೊಳ್ಳಬೇಕು ಅದು ಬಿಟ್ಟು ಸಣ್ಣ ಪುಟ್ಟವರ ಹಾಗೆ ನಡೆದು ಕೊಳ್ಳಬಾರದು ಎಂದು ವ್ಯಂಗ್ಯವಾಡಿದರು.ಇನ್ನು ಕೋಲಾರ ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದಿಂದ ಈ ಭಾರಿ ಸ್ಪರ್ಧೆ ಮಾಡುವುದಿಲ್ಲ ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ ಟಿಕೇಟ್ ಕೇಳಿದ್ದಿನಿ, ವರಿಷ್ಟುರು ಟಿಕೇಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೆನೆ ಇಲ್ಲದೆ ಇದ್ದರೆ ಪಕ್ಷದ ಸಂಘಟನೆಯನ್ನು ಮಾಡುತ್ತೆನೆ ಎಂದು ತಿಳಿಸಿದ್ರು.