ಸಿದ್ದರಾಮಯ್ಯ ಇಂತಹ ದುರಹಂಕಾರದ ಮಾತು ಬಿಡಬೇಕು ಎಂದು ಸಿಎಂ ಹೇಳಿಕೆಗೆ

ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದ್ರು.ಮೈಸೂರಲ್ಲಿ ಮಾತಾಡಿದ ಅವ್ರು,ಯದುವೀರ್ ಯಾವ ಮಹಾರಾಜ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೈಸೂರು ಮಹಾರಾಜರ ಕೊಡುಗೆ ಅನನ್ಯವಾದದ್ದು. ಅವರ ಕೆಲಸದಲ್ಲಿ ಎಳ್ಳಷ್ಟು ಕೆಲಸ ಮಾಡಲು ನಿಮ್ಮ ಕೈಲಿ ಆಗಿದ್ಯಾ..? ಮೈಸೂರು ಜಿಲ್ಲೆಗೆ ನೀವು ನೀಡಿರುವ ಕೊಡುಗೆಗಳು ಏನು..? ರಾಜಮನೆತನದ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡಿ

ಎಂದು ಸಿದ್ದರಾಮಯ್ಯ ಹೇಳಿಕೆಗೆ ಡಾ.ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದ್ರು. ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. JDS 3 ಸೀಟು ಕೇಳಿದೆ.. ವರಿಷ್ಠರ ಹಂತದಲ್ಲಿ ತೀರ್ಮಾನ ಆಗಲಿದೆ. ಹಾಗಾಗಿ ಅದರ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ. HDD, HDK ಸೇರಿ ಎಲ್ಲರನ್ನು ಪ್ರಚಾರಕ್ಕೆ ಆಹ್ವಾನಿಸಲಾಗುವುದು. ಮೈಸೂರು-ಕೊಡಗು ಅಭ್ಯರ್ಥಿ ಯದುವೀರ್ ಪ್ರಚಾರ ಆರಂಭಿಸಿದ್ದಾರೆ. ಜಿ.ಟಿ.ದೇವೇಗೌಡರ ಖುದ್ದು ಭೇಟಿಯಾಗಿ ಬೆಂಬಲ ಕೇಳಿದ್ದಾರೆ. ಯದುವೀರ್ ಪರ ಜಿ.ಟಿ.ದೇವೇಗೌಡ ಬೆಂಬಲ ಘೋಷಿಸಿದ್ದಾರೆ. JDS ಮುಖಂಡರ ವಿಶ್ವಾಸಕ್ಕೆ

ತೆಗೆದುಕೊಂಡು ಪ್ರಚಾರ ಮಾಡ್ತೇವೆ. ಮೈಸೂರು ರಾಜಮನೆತನದ ಬಗ್ಗೆ ಜನರಿಗೆ ಅಪಾರ ಗೌರವ ಇದೆ. ನಮ್ಮ ಅಭ್ಯರ್ಥಿ ಯದುವೀರ್ ಒಡೆಯರ್ ಗೆಲುವು ಸಾಧಿಸಲಿದ್ದಾರೆ. ಸಂಸದ ಪ್ರತಾಪ್ ಸಿಂಹ ಕೂಡ ಒಳ್ಳೆಯ ಕೆಲಸ ಮಾಡಿದ್ದಾರೆ. ಟಿಕೆಟ್ ತಪ್ಪಿರುವ ಕಾರಣ ಸಹಜವಾಗಿಯೇ ಬೇಜಾರಾಗಿರುತ್ತದೆ. ಮೋದಿ ಪರ ಕೆಲಸ ಮಾಡ್ತೇನೆಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಆದ್ದರಿಂದ ಪ್ರತಾಪ್ ಸಿಂಹ ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ತಿಳಿಸಿದ್ರು.
